ಯಲ್ಲಾಪುರ : ತಾಲೂಕಿನ ದೊಡ್ಡಯಲವಳ್ಳಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದೊಡ್ಡಯಲವಳ್ಳಿಯ ಕೂಲಿ ಕೆಲಸದ ಬಯ್ಯಾ ತಂದೆ ವಾಗು ಕೋಕರೆ ಎಂದು ಗುರುತಿಸಲಾಗಿದೆ. ಈತನು ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪಿಎಸ್ಸೈ ರಾಜಶೇಖರ ವಂದಲಿ ಹಾಗೂ ಸಿಬ್ಬಂದಿಗಳು, ಆರೋಪಿಯಿಂದ 50 ಸಾವಿರ ರೂ ಮೌಲ್ಯದ 860 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
PublicNext
10/06/2026 08:26 pm
LOADING...