ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆಯಲ್ಲಿ ಉತ್ತಮ ಮುಂಗಾರು ಮಳೆಗೆ ವಿಶೇಷ ಪೂಜೆ

ದಾವಣಗೆರೆ : ಬೆಣ್ಣೆ ನಗರಿಯಲ್ಲಿ ಮುಂಗಾರು ಚೆನ್ನಾಗಿ ಆಗಲಿ ಅಂತ ವಿಶೇಷ ಪೂಜೆ ಮಾಡಲಾಗಿದೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಹತ್ತಿರವಿರುವ ಕರಿಗಲ್ಲುಗೆ ಜಿಲ್ಲೆ ಹಾಗೂ ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಂಘ ಹಾಗೂ ಕೃಷಿ ಇಲಾಖೆ ವತಿಯಿಂದ ವರುಣನ ಕೃಪೆಗಾಗಿ ಕರಿಗಲ್ಲು ಪೂಜೆಯನ್ನು ನೆರವೇರಿಸಲಾಯಿತು.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ, ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಅತ್ಯಂತ ಶಾಸ್ತ್ರೋಕ್ತವಾಗಿ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಸನ್ನಿಧಾನದಲ್ಲಿ ಭಜನಾ ಮಂಡಳಿಯೊಂದಿಗೆ ದೇವಿಯನ್ನು ಪ್ರಾರ್ಥಿಸಿ ಪೂರ್ಣ ಕುಂಭ ಮೇಳದೊಂದಿಗೆ ಕರಿಗಲ್ಲು ಪೂಜೆಯನ್ನು ಮಾಡಲಾಯಿತು.

Edited By : Vinayak Patil
Kshetra Samachara

Kshetra Samachara

10/06/2026 09:36 pm

Cinque Terre

7.05 K

Cinque Terre

0