ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಯಾರು ಹೋಗ್ಬೇಕು?

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದ್ರೂ ಗಿಲ್ಲಿ, ಕಾವ್ಯ, ರಕ್ಷಿತಾ ಶೆಟ್ಟಿ ಹವಾ ಇನ್ನೂ ಕಮ್ಮಿ ಆಗಿಲ್ಲ! ಅಷ್ಟರಲ್ಲೇ ಸೀಸನ್ 13ರ ಪ್ರೀ-ಪ್ರೊಡಕ್ಷನ್ ವರ್ಕ್ ಸೈಲೆಂಟ್ ಆಗಿ ಶುರುವಾಗಿದೆ .

ಈ ಸಲದ ಬಿಗ್ ಟ್ವಿಸ್ಟ್ ಏನಪ್ಪಾ ಅಂದ್ರೆ, ನಿಮ್ಮ-ನಮ್ಮಂತ ಜನಸಾಮಾನ್ಯರಿಗೂ ಮನೆ ಒಳಗೆ ಹೋಗೋಕೆ ಕಲರ್ಸ್ ಕನ್ನಡ ಆನ್‌ಲೈನ್ ಆಡಿಷನ್ ಓಪನ್ ಮಾಡಿದೆ . ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಸಂಭಾವ್ಯ ಪಟ್ಟಿ ಮಾತ್ರ ಆವಾಗ್ಲೇ ಸಖತ್ ವೈರಲ್ ಆಗ್ತಿದೆ.

"ಭಾಗ್ಯಲಕ್ಷ್ಮೀ ಮುಗಿಸಿ ಕ್ವಾಟ್ಲೆ ಕಿಚನ್‌ನಲ್ಲಿ ಬ್ಯುಸಿ ಇರೋ ಸುಷ್ಮಾ ಕೆ ರಾವ್ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ? ಇತ್ತ ರಾಮಾಚಾರಿ ಸೀರಿಯಲ್ ಖ್ಯಾತಿಯ ರಿತ್ವಿಕ್ ಕೃಪಾಕರ್ ಬಿಗ್ ಬಾಸ್ ಮೂಲಕ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡ್ತಾರಾ ಅನ್ನೋ ಕುತೂಹಲ ಜೋರಾಗಿದೆ.

"ಇವರಷ್ಟೇ ಅಲ್ಲದೇ ರೀಲ್ಸ್ ಸ್ಟಾರ್ ಅಮುಕು ದುಮುಕು, ಅಮೂಲ್ಯ, ಕಾಮಿಡಿ ಸ್ಟಾರ್ ರಾಘವ್ ಮತ್ತು ವೆಂಕಿ ಹೆಸರು ಕೂಡ ಲಿಸ್ಟ್‌ನಲ್ಲಿದೆ. ನಿಮ್ಮ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಗೆ ಯಾರು ಹೋಗ್ಬೇಕು? ಈಗಲೇ ಕಮೆಂಟ್ ಮಾಡಿ ತಿಳಿಸಿ.

Edited By :
PublicNext

PublicNext

11/06/2026 09:28 am

Cinque Terre

4 K

Cinque Terre

5