ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BNGvsAUS 2nd ODI: 0 ರನ್‌ಗೆ 3 ವಿಕೆಟ್! - ಕೆಟ್ಟ ದಾಖಲೆಗೆ ಗುರಿಯಾದ ಆಸ್ಟ್ರೇಲಿಯಾ

ಢಾಕಾ: ಬಾಂಗ್ಲಾದೇಶ ವಿರುದ್ಧ ಇಂದು (ಗುರುವಾರ) ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಕೆಟ್ಟ ದಾಖಲೆಗೆ ಗುರಿಯಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಒಂದೂ ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲು. ಇದು ತಂಡದ ಪಾಲಿಗೆ ಅತ್ಯಂತ ಕಳಪೆ ಆರಂಭವಾಗಿತ್ತು.

ಈ ಪಂದ್ಯದಲ್ಲಿ ಮ್ಯಾಥ್ಯೂ ಶಾರ್ಟ್ ನಾಲ್ಕು ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ಔಟಾದರೆ, ಕೂಪರ್ ಕಾನೊಲಿ ಮೊದಲ ಎಸೆತದಲ್ಲೇ (ಗೋಲ್ಡನ್ ಡಕ್) ಮತ್ತು ಮ್ಯಾಟ್ ರೆನ್ಶಾ ಐದು ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಈ ಮೂಲಕ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕವು ಸಂಪೂರ್ಣ ಕುಸಿತ ಕಂಡಿತು.

ಇದಲ್ಲದೆ, ಪುರುಷರ ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಇಬ್ಬರು ಆರಂಭಿಕ ಆಟಗಾರರು ಡಕ್ ಔಟ್ ಆದ ಮೂರನೇ ನಿದರ್ಶನ ಇದಾಗಿದೆ.

Edited By : Vijay Kumar
PublicNext

PublicNext

11/06/2026 02:27 pm

Cinque Terre

2.25 K

Cinque Terre

0

ಸಂಬಂಧಿತ ಸುದ್ದಿ