ಯಾದಗಿರಿ: ಯಾದಗಿರಿ ಜಿಲ್ಲೆ ವಡಿಗೇರಾ ತಾಲೂಕಿನ ಖಾನಾಪುರ ಗ್ರಾಮದ ಪ್ರೌಢಶಾಲೆಯಲ್ಲಿ 19 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಅಚ್ಚುಮೆಚ್ಚಿನ ಟೀಚರ್‌ಗೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅದ್ದೂರಿಯಾಗಿ ಬೀಳ್ಕೊಟ್ಟರು.
ಹೂವಿನ ಮಳೆಗೈದು, ಭಾವನಾತ್ಮಕವಾಗಿ ಕಾಲಿಗೆ ಬಿದ್ದು ಗೌರವ ಸಲ್ಲಿಸಿದ ವಿದ್ಯಾರ್ಥಿಗಳು, 'ಟೀಚರ್ ನಮಗೆ ತಾಯಿ ಹಾಗೆ, ಅವರಿಂದ ಕಲಿತು ಇವತ್ತು ಉನ್ನತ ಸ್ಥಾನದಲ್ಲಿದ್ದೀವಿ, ಅವರ ಋಣ ಮರೆಯೋಕಾಗಲ್ಲ' ಎಂದರು. ಸುಗುಣಾವಂತಿಯ ಟೀಚರ್ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಗ್ರಾಮಸ್ಥರು ಹಾರೈಸಿದ್ದಾರೆ.
PublicNext
11/06/2026 08:16 pm
LOADING...