ಬೆಂಗಳೂರು : ರೈತರ ಹುಳು ಬಿದ್ದ ಭತ್ತದ ಮೂಟೆಯನ್ನು ಮಂತ್ರಾಕ್ಷತೆಯಿಂದ ಪರಿಶುದ್ಧಗೊಳಿಸಿದ ರಾಯರ ಪವಾಡ ಹಾಗೂ ಸಂಸಾರ ಜೀವನದಿಂದ ಸನ್ಯಾಸತ್ವದತ್ತ ಹೊರಳುವಾಗ ಪತ್ನಿ ಸರಸ್ವತಿ ಪಡುವ ಪಾಡು ವೀಕ್ಷಕರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಈ ಭಾವುಕ ಕಥಾಹಂದರ ಈಗ ಮತ್ತೊಂದು ಐತಿಹಾಸಿಕ ಘಟ್ಟಕ್ಕೆ ತಲುಪಿದೆ. ತಂಜಾವೂರಿನಲ್ಲಿ ರಾಜ ರಘುನಾಥ ಭೂಪಾಲನ ಸಮ್ಮುಖದಲ್ಲಿ, ಗುರು ಸುಧೀಂದ್ರರು ವೆಂಕಟನಾಥರಿಗೆ ಸನ್ಯಾಸ ದೀಕ್ಷೆ ನೀಡಿ ಶ್ರೀ ರಾಘವೇಂದ್ರ ತೀರ್ಥರು ಎಂದು ನಾಮಕರಣ ಮಾಡುವ ಮಹಾ ಪಟ್ಟಾಭಿಷೇಕದ ಕ್ಷಣಗಳು ಈ ವಾರಾಂತ್ಯದಲ್ಲಿ ಅನಾವರಣಗೊಳ್ಳಲಿವೆ.
ಭಕ್ತಿ ಮತ್ತು ವೈರಾಗ್ಯದ ಸಂಕೇತವಾಗಿರುವ ರಾಯರ ಪವಿತ್ರ ಪಾತ್ರದಲ್ಲಿ ನಟ 'ಪರೀಕ್ಷಿತ್' ಅದ್ಭುತವಾಗಿ ನಟಿಸಿದ್ದಾರೆ. ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರ ತೀರ್ಥರ ಈ ದೈವಿಕ ಆಗಮನ ಹಾಗೂ ರಾಯರ ಪಟ್ಟಾಭಿಷೇಕದ ವೈಭವವನ್ನು ಕಣ್ತುಂಬಿಕೊಳ್ಳಲು ಮರೆಯದಿರಿ.ವೀಕ್ಷಿಸಿ ಶ್ರೀ ರಾಘವೇಂದ್ರ ಮಹಾತ್ಮೆ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.
PublicNext
13/06/2026 12:51 pm
LOADING...