ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೇಕ್ಷಕರಿಗೆ ಕಂಪ್ಲೀಟ್ ಮನರಂಜನೆ ನೀಡಲು ಬರ್ತಿದೆ 'ಗೋಲ್ಮಾಲ್ ಗ್ಯಾಂಗ್'; ಭರವಸೆ ಮೂಡಿಸಿದ ಟೀಸರ್!

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಸದ್ಯ ಕಾಮೆಡಿ ಮತ್ತು ಸಸ್ಪೆನ್ಸ್ ಸಿನಿಮಾಗಳದ್ದೇ ಹವಾ. ಆ ಸಾಲಿಗೆ ಸೇರಲು ಈಗ ಪಕ್ಕಾ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಗೋಲ್ಮಾಲ್ ಗ್ಯಾಂಗ್ ಸಿನಿಮಾ ಸಜ್ಜಾಗಿದ್ದು, ಚಿತ್ರದ ಆಕರ್ಷಕ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಭರವಸೆ ಮೂಡಿಸಿದೆ.

ಶಾಂತ್ವು ಯೂನಿವರ್ಸಲ್ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಕೆ. ಸತೀಶ್ ಚಂದ್ರ ಎಲೆಕೆರೆ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಶಿವಕುಮಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾದಲ್ಲಿ ಬರೋಬ್ಬರಿ 16 ಮುಖ್ಯ ಪಾತ್ರಗಳಿದ್ದು, ಪ್ರತಿಯೊಂದು ಪಾತ್ರವೂ ಪ್ರೇಕ್ಷಕರನ್ನು ನಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಚಿತ್ರದ ಶೀರ್ಷಿಕೆಗೆ ತಕ್ಕಂತೆ ಗೋಲ್ಮಾಲ್ ಮಾಡುವ ಗ್ಯಾಂಗ್‌ಗಳ ಸುತ್ತ ಇಡೀ ಕಥೆ ಸಾಗಲಿದೆ.

ಚಿತ್ರದ ಮೂಲಕ ನಾಯಕನಾಗಿ ಪರಿಚಯವಾಗುತ್ತಿರುವ ಕಾರ್ತಿಕ್ ರುವಾರಿ, ತಮ್ಮನ್ನು ನಂಬಿ ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ನಾಯಕಿ ಆರಾಧನಾ ಭಟ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದು, ಹಿರಿಯ ನಟ ಮಂಡ್ಯ ರಮೇಶ್ ಅವರ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಕಾರ್ಮಿಕರ ಸರಬರಾಜು ಮಾಡುವ ಮೂಲಕ ಸುದೀರ್ಘ ಅನುಭವ ಹೊಂದಿರುವ ನಿರ್ಮಾಪಕ ಸತೀಶ್ ಚಂದ್ರ, ಚಿತ್ರರಂಗದಲ್ಲಿ ಉದ್ಯೋಗ ಸೃಷ್ಟಿಸುವ ಉದಾತ್ತ ಉದ್ದೇಶದಿಂದ ಈ ಸಿನಿಮಾ ನಿರ್ಮಾಣ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಂಪ್ಲೀಟ್ ಕಾಮೆಡಿ ಪ್ಯಾಕೇಜ್ ಆಗಿರುವ 'ಗೋಲ್ಮಾಲ್ ಗ್ಯಾಂಗ್' ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Edited By : Vijay Kumar
PublicNext

PublicNext

11/06/2026 01:52 pm

Cinque Terre

2.69 K

Cinque Terre

0

ಸಂಬಂಧಿತ ಸುದ್ದಿ