ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ: ಪ್ರಧಾನಿ ಮೋದಿ ಐತಿಹಾಸಿಕ ಸಾಧನೆಗೆ ನಟ ಸುದೀಪ್, ರಿಷಬ್ ಶೆಟ್ಟಿ ಶುಭಾಶಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಹಿಂದೆ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿರುವ ಮೋದಿಯವರಿಗೆ ಸ್ಯಾಂಡಲ್‌ವುಡ್ ತಾರೆಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟರಾದ ಕಿಚ್ಚ ಸುದೀಪ್ ಮತ್ತು ರಿಷಬ್ ಶೆಟ್ಟಿ ಸೇರಿದಂತೆ ಹಲವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಅವರು ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿರುವುದಕ್ಕೆ ಚಲನಚಿತ್ರ ರಂಗದಿಂದ ಅಭಿನಂದನೆಗಳು ಸಲ್ಲುತ್ತಿವೆ.

ಮೋದಿಯವರ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಕಿಚ್ಚ ಸುದೀಪ್, "ನಾವು ಈ ಸಾಧನೆಯನ್ನು ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು. 12 ವರ್ಷಗಳ ಕಾಲ ಅದೇ ವೇಗ, ಅದೇ ಶಕ್ತಿಯೊಂದಿಗೆ, ಯಾವುದೇ ನಿಧಾನಗತಿ ಇಲ್ಲದೆ ಕಾರ್ಯನಿರ್ವಹಿಸಿದ್ದೀರಿ. ನರೇಂದ್ರ ಮೋದಿಯವರೇ, ನಿಮ್ಮ ಸಮರ್ಪಣೆ ಮತ್ತು ಸಾಧನೆಗೆ ನನ್ನ ಹೃದಯಪೂರ್ವಕ ನಮನಗಳು. ಇದು ನಮಗೆ ಹೆಮ್ಮೆಯ ಕ್ಷಣ. ನೀವು ನಿರಂತರವಾಗಿ ಯಶಸ್ಸು ಸಾಧಿಸಿ ಮತ್ತು ನಿಮ್ಮ ಮುಂದಿನ ಎಲ್ಲ ಪ್ರಯತ್ನಗಳಿಗೂ ಶುಭವಾಗಲಿ" ಎಂದು ಹಾರೈಸಿದ್ದಾರೆ.

ಇನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಕೂಡ ಪ್ರಧಾನಿ ಮೋದಿಯವರ ಸಾಧನೆಯನ್ನು ಕೊಂಡಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿರುವ ರಿಷಬ್, "ಐತಿಹಾಸಿಕ ನಾಯಕನಿಗೆ ಇದೊಂದು ಮೈಲಿಗಲ್ಲು. ಭಾರತದಲ್ಲಿ ಅತಿ ಹೆಚ್ಚು ಕಾಲ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ವಿಕಸಿತ ಭಾರತಕ್ಕಾಗಿ ನಿಮ್ಮ ಅವಿಶ್ರಾಂತ ಸೇವೆ, ದೂರದೃಷ್ಟಿ ಮತ್ತು ಸಮರ್ಪಣೆ ಶ್ಲಾಘನೀಯ. ರಾಷ್ಟ್ರವನ್ನು ನೀವು ಇನ್ನೂ ಎತ್ತರಕ್ಕೆ ಕೊಂಡೊಯ್ಯಿರಿ" ಎಂದು ಶುಭ ಹಾರೈಸಿದ್ದಾರೆ.

Edited By :
PublicNext

PublicNext

11/06/2026 03:02 pm

Cinque Terre

3.18 K

Cinque Terre

0

ಸಂಬಂಧಿತ ಸುದ್ದಿ