ನವಲಗುಂದ: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಚಿವ ಸಂಪುಟದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಅಭಿಮಾನಿ ಬಳಗ ಆಗ್ರಹ ವ್ಯಕ್ತಪಡಿಸಿದರು.
ಪಟ್ಟಣದ ಅಣ್ಣಿಗೇರಿ ರಸ್ತೆಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಭಿಮಾನಿ ಬಳಗದ ಆನಂದ ಹವಳಕೋಡ ಸುಮಾರು 20 ವರ್ಷದ ನಂತರ ನವಲಗುಂದ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ವಹಿಸಿಕೊಂಡಿದ್ದು, ಶಾಸಕ ಕೋನರಡ್ಡಿ ಅವರು ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರು ಆಗಿದ್ದು ಸದನದಲ್ಲಿ ರೈತರ ಪರವಾಗಿ ಯಾವಾಗಲೂ ಧ್ವನಿ ಎತ್ತುವ ನಾಯಕರಾಗಿದ್ದಾರೆ ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಸ್ಥಾನ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಭಿಮಾನಿ ಬಳಗದ ಅಧ್ಯಕ್ಷ ಪ್ರಭಾಕರ ಮೋಹಿತೆ, ಉಸ್ಮಾನ್ ಬಬರ್ಚಿ, ಜೀವನ ಪವಾರ, ಡಿ.ಕೆ.ಹಳ್ಳದ, ಪ್ರಕಾಶ ಶಿಗ್ಲಿ, ಶಿವಾಜಿ ಕಲಾಲ್, ಶೈಪುದ್ದೀನ್ ಅವರಾದಿ, ಯಲ್ಲಪ್ಪ ಭೋವಿ, ಕುಮಾರ ಲಕ್ಕಮ್ಮನವರ, ಮದರ ಉಗರಗೋಳ, ಚನ್ನಪ್ಪ ನಾಗರಳ್ಳಿ, ಶಂಭು ಕರಲಿಂಗಣ್ಣವರ, ಜಗದೀಶ ಉಕ್ಕಲಿ ಸೇರಿದಂತೆ ಅನೇಕರಿದ್ದರು.
Kshetra Samachara
13/06/2026 03:53 pm
LOADING...