ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿಯಲ್ಲಿ ಮಳೆ ಅಬ್ಬರ : ರಾತ್ರಿಯಿಡೀ ಸಂಕಷ್ಟದಲ್ಲಿ ಜನಜೀವನ

ಬಳ್ಳಾರಿ ನಗರದಲ್ಲಿ ನಿನ್ನೆ ರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.

‎ತಗ್ಗು ಪ್ರದೇಶಗಳಲ್ಲಿನ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಯ್ತು. ಹಲವೆಡೆ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳಲ್ಲಿ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು. ಇನ್ನೂ ಸತ್ಯನಾರಾಯಣ ಪೇಟೆ ಮತ್ತು ದುರ್ಗಮ್ಮ ದೇಗುಲದ ಅಂಡರ್ ಪಾಸ್ ನಲ್ಲಿ ನೀರು ತುಂಬಿದ ಪರಿಣಾಮ ಸವಾರರು ಕೆಲ ಕಾಲ ಪರದಾಡಿದರು. ವಿದ್ಯುತ್ ನಿರ್ವಹಣೆ ಸರಿಯಾಗಿ ಮಾಡದ ಹಿನ್ನೆಲೆ ಮಳೆಗಳಿಗೆ ವಿದ್ಯುತ್ ಕಂಬದಲ್ಲಿನ ವೈರ್ ತಾಗಿ ಕಿಡಿ ಹಾರಿ ಕೆಲವು ಪ್ರದೇಶಗಳಲ್ಲಿ ಆತಂಕವನ್ನು ಸೃಷ್ಟಿ ಮಾಡಿದ್ದವು.

Edited By :
PublicNext

PublicNext

13/06/2026 04:42 pm

Cinque Terre

10.54 K

Cinque Terre

0