ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಎಲ್. ರಾಹುಲ್ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗ: ಕೋಚ್ ಗೌತಮ್ ಗಂಭೀರ್ ನಿರ್ಧಾರಕ್ಕೆ ತೀವ್ರ ಟೀಕೆ!

ಧರ್ಮಶಾಲಾ: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕೆ.ಎಲ್. ರಾಹುಲ್ ಅವರನ್ನು ಬಳಸಿಕೊಳ್ಳುತ್ತಿರುವ ರೀತಿಗೆ ಸಂಬಂಧಿಸಿದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅನುಭವಿ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ಪದೇ ಪದೇ ಕೆಳ ಕ್ರಮಾಂಕಕ್ಕೆ ತಳ್ಳುತ್ತಿರುವುದು ತಂಡಕ್ಕೆ ನಷ್ಟ ಉಂಟುಮಾಡುತ್ತಿದೆ ಎಂದು ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ಜನವರಿ 14ರಂದು ನ್ಯೂಜಿಲೆಂಡ್‌ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್, ಅಜೇಯ 112 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಆದಾಗ್ಯೂ, ಅವರ ಅಂಕಿಅಂಶಗಳು ಬೇರೆಯದೇ ಕಥೆ ಹೇಳುತ್ತವೆ. ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ 4ನೇ ಕ್ರಮಾಂಕದಲ್ಲಿ 55.8 ಮತ್ತು 5ನೇ ಕ್ರಮಾಂಕದಲ್ಲಿ 59.4 ರನ್ ಸರಾಸರಿ ಹೊಂದಿದ್ದಾರೆ. ಆದರೆ 6ನೇ ಕ್ರಮಾಂಕದಲ್ಲಿ ಅವರ ಸರಾಸರಿ 47.4 ಮಾತ್ರ ಇದೆ. ಈ ಅಂಕಿಅಂಶಗಳು, ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವುದರಿಂದ ಅವರ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ವಾದಕ್ಕೆ ಪುಷ್ಟಿ ನೀಡುತ್ತವೆ.

ಲೆಫ್ಟ್-ರೈಟ್ ಬ್ಯಾಟಿಂಗ್ ಸಂಯೋಜನೆಗಾಗಿ ನಿತೀಶ್ ಕುಮಾರ್ ರೆಡ್ಡಿಯಂತಹ ಯುವ ಆಟಗಾರರಿಗೆ ಅವಕಾಶ ನೀಡುವ ಬದಲು, ಅನುಭವಿ ರಾಹುಲ್ ಅವರನ್ನೇ ಯಾಕೆ ಬಲಿಪಶು ಮಾಡಲಾಗುತ್ತಿದೆ ಎಂದು ವಿಮರ್ಶಕರು ಪ್ರಶ್ನಿಸುತ್ತಿದ್ದಾರೆ. ಗಂಭೀರ್ ಅವರ ಈ "ಅತಿಯಾದ ಫ್ಲೆಕ್ಸಿಬಿಲಿಟಿ" ಪ್ರಯೋಗ ಮುಂದುವರಿಯುತ್ತದೋ ಅಥವಾ ರಾಹುಲ್ ತಮಗೆ ಸೂಕ್ತವಾದ ಬ್ಯಾಟಿಂಗ್ ಕ್ರಮಾಂಕಕ್ಕೆ ಮರಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ. ಈ ನಿರ್ಧಾರವು ತಂಡದ ಸಮತೋಲನ ಮತ್ತು ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.

Edited By : Vijay Kumar
PublicNext

PublicNext

14/06/2026 02:27 pm

Cinque Terre

7.41 K

Cinque Terre

0

ಸಂಬಂಧಿತ ಸುದ್ದಿ