ದಾವಣಗೆರೆ : ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಹಿನ್ನೆಲೆ ವಾಯು ವಿಹಾರಿಗಳಿಂದ ನಮ್ಮ ನಡೆ ಆರೋಗ್ಯದ ಕಡೆ ಎಂಬ ಅಡಿಬರಹದಲ್ಲಿ ಕಾಲ್ನಡಿಗೆ ಜಾಥಾವನ್ನು ನಡೆಸಲಾಯಿತು.
ಒತ್ತಡದ ಬದುಕಿನಲ್ಲಿ ದಿನದಿಂದ ದಿನಕ್ಕೆ ಆರೋಗ್ಯ ನಿರ್ಲಕ್ಷ್ಯ ಹೆಚ್ಚುತ್ತಿರುವ ಹಿನ್ನೆಲೆ ಜಾಗೃತಿ ಮೂಡಿಸಲು ವಿಶೇಷ ಪ್ರಯತ್ನವನ್ನು ದಾವಣಗೆರೆ ಹೊರವಲಯದಲ್ಲಿ ಇರುವ ಕುಂದವಾಡ ಕೆರೆ ವಾಯುವಿಹಾರಿಗಳ ನೇತೃತ್ವದಲ್ಲಿ ಮಾಡಲಾಯಿತು.
ದಾವಣಗೆರೆಯ ಸಂಗೊಳ್ಳಿ ರಾಯಣ್ಣ ವೃತ್ತದ ಪಿ.ಬಿ ರಸ್ತೆಯಿಂದ ಹರಿಹರದ ಅಮರಾವತಿ ಆಂಜನೇಯ ದೇವಸ್ಥಾನದವರೆಗೆ ಸರಿಸುಮಾರು 9 ಕಿಲೋಮೀಟರ್ ವರೆಗೆ ವಾಯುವಿಹಾರಿಗಳು ಕಾಲ್ನಡಿಗೆ ಜಾಥಾ ಮೂಲಕ ಆರೋಗ್ಯ ಜಾಗೃತಿ ಸಂದೇಶ ರವಾನಿಸಿದರು.
300ಕ್ಕೂ ಹೆಚ್ಚು ವಾಯುವಿಹಾರಿಗಳು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದ್ದರು. ಆಂಜನೇಯ ದೇವಸ್ಥಾನದ ಆವರಣದಲ್ಲಿ ಹೆಲ್ತ್ ಚೆಕ್ ಅಪ್ ಕ್ಯಾಂಪ್ ಏರ್ಪಡಿಸಲಾಗಿತ್ತು.
PublicNext
14/06/2026 10:07 pm
LOADING...