ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ತಪ್ಪು ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳೋದು ಬಿಟ್ಟು ತಾಲಿಬಾನ್ ಪ್ರವೃತ್ತಿ ಸರಿನಾ ಪೊಲೀಸರೇ?

ತೆನಾಲಿ (ಆಂಧ್ರಪ್ರದೇಶ): ಮದ್ಯದ ಅಮಲಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಮೇಲೆಯೇ ಹಲ್ಲೆ ನಡೆಸಿದ್ದ ಮೂವರು ಯುವಕರಿಗೆ ಆಂಧ್ರಪ್ರದೇಶದ ಪೊಲೀಸರು ನಡುರಸ್ತೆಯಲ್ಲೇ ಲಾಠಿ ರುಚಿ ತೋರಿಸಿರುವ ಘಟನೆಯ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ಘಟನೆ ಒಂದು ವರ್ಷ ಹಳೆಯದಾಗಿದ್ದು. ಆಂಧ್ರ ತೆನಾಲಿಯಲ್ಲಿ ನಡೆದಿದ್ದು ಎಂದು ಮಾಹಿತಿ ಇದೆ. ಆದರೆ ಪೊಲೀಸರ ಈ ಕ್ರಮದ ಬಗ್ಗೆ ಈಗ ಚರ್ಚೆ ಮುನ್ನೆಲೆಗೆ ಬಂದಿದೆ.

ಯುವಕರು ತಪ್ಪಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ನಡುರಸ್ತೆಯಲ್ಲಿ ಈ ರೀತಿ ಕೂರಿಸಿ ಅಂಗಾಲಿಗೆ ಅಮಾನುಷವಾಗಿ ಲಾಠಿಯಿಂದ ಹೊಡೆಯುವ ಅಧಿಕಾರವನ್ನು ಈ ಪೊಲೀಸರಿಗೆ ಯಾರು ಕೊಟ್ಟರು? ಇದೇ ಜಾಗದಲ್ಲಿ ಯಾರೋ ಶ್ರೀಮಂತರ ಮಕ್ಕಳು ಇದ್ದಿದ್ರೆ ಈ ಪೊಲೀಸರು ಇದೇ ರೀತಿ ಮಾಡ್ತಿದ್ರಾ? ಇದು ತಾಲಿಬಾನಿ ಪ್ರವೃತ್ತಿ ಅಲ್ಲವೇ? ಎಂಬ ಚರ್ಚೆ ಮಾಡುತ್ತಿದ್ದಾರೆ. ಯುವಕರನ್ನು ಬರಿಗಾಲಿನಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ತಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣವಾದ 'X' (ಟ್ವಿಟರ್) ನಲ್ಲಿ ಭಾರಿ ವೈರಲ್ ಆಗಿದೆ.

ಒಂದೆಡೆ ಸಾರ್ವಜನಿಕರು ಪೊಲೀಸರ ಈ 'ತ್ವರಿತ ನ್ಯಾಯ'ವನ್ನು ಬೆಂಬಲಿಸುತ್ತಿದ್ದರೆ, ಮತ್ತೊಂದೆಡೆ ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. "ಆರೋಪಿಗಳು ಎಷ್ಟೇ ದೊಡ್ಡ ತಪ್ಪು ಮಾಡಿದ್ದರೂ ದೇಶದಲ್ಲಿ ಕಾನೂನು ಮತ್ತು ನ್ಯಾಯಾಲಯಗಳಿವೆ. ಕಾನೂನು ಪ್ರಕ್ರಿಯೆಯನ್ನು ಬದಿಗಿಟ್ಟು, ಪೊಲೀಸರೇ ಈ ರೀತಿ ಸಾರ್ವಜನಿಕವಾಗಿ ಶಿಕ್ಷೆ ನೀಡುವುದು ಸಂವಿಧಾನ ವಿರೋಧಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ" ಎಂದು ಸಂಘಟನೆಗಳು ಪೊಲೀಸರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

Edited By : Nagaraj Tulugeri
PublicNext

PublicNext

15/06/2026 02:28 pm

Cinque Terre

3.47 K

Cinque Terre

2

ಸಂಬಂಧಿತ ಸುದ್ದಿ