ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಪ್ರಿಯದರ್ಶಿನಿ' ಯೋಜನೆ ಉದ್ಘಾಟನೆ ವೇಳೆ ಸಚಿವೆ ಬಿಂದು ಕೃಷ್ಣ ತಲೆಯ ಮೇಲೆ ಬಿದ್ದ ಬಿಸಿ ಪಾಯಸ

ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ ʻಪ್ರಿಯದರ್ಶಿನಿʼ ಉಚಿತ ಬಸ್‌ ಪ್ರಯಾಣ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅನಿರೀಕ್ಷಿತ ಹಾಗೂ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತು.

ಕೊಲ್ಲಂ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ನಡೆದ ಈ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ಯೂತ್‌ ಕಾಂಗ್ರೆಸ್‌ನಿಂದ ಸಾರ್ವಜನಿಕರು ಮತ್ತು ಗಣ್ಯರಿಗೆ ಪಾಯಸ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಭಾರೀ ಜನದಟ್ಟಣೆಯಿಂದ ತುಂಬಿದ್ದ ಉದ್ಘಾಟನಾ ಬಸ್ಸಿನೊಳಗೆ ಪಾಯಸ ವಿತರಿಸುತ್ತಿದ್ದಾಗ, ಆಕಸ್ಮಿಕವಾಗಿ ಬಿಸಿ ಪಾಯಸ ಚೆಲ್ಲಿ, ನೇರವಾಗಿ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿದ್ದಿದೆ. ಈ ಘಟನೆಯಿಂದ ಬಸ್‌ನಲ್ಲಿದ್ದವರೆಲ್ಲರೂ ಕ್ಷಣಕಾಲ ಆಘಾತಕ್ಕೊಳಗಾಗಿದ್ದರು.

ಘಟನೆ ಸಂಭವಿಸಿದ ತಕ್ಷಣವೇ ಅಲ್ಲಿದ್ದ ಜನರು ಟವೆಲ್‌ ಹಾಗೂ ಶಾಲುಗಳನ್ನು ಬಳಸಿ ಸಚಿವೆಯ ತಲೆ ಹಾಗೂ ಮುಖವನ್ನು ಒರೆಸಿದರು. ಬಿಸಿಯ ನೋವಿನ ನಡುವೆಯೂ ಸಚಿವೆ ಶಾಂತಿಯಿಂದ ಇದ್ದರು, ಕಾರ್ಯಕ್ರಮ ಸ್ಥಗಿತಗೊಳಿಸಲು ನಿರಾಕರಿಸಿ, ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಅವರು ಬಸ್‌ನಲ್ಲೇ ಕುಳಿತು, ಚಿನ್ನಕ್ಕಡ ತಲುಪುವವರೆಗೆ ಪ್ರಯಾಣಿಸಿ, ನಂತರವೇ ಹಿಂತಿರುಗಿದರು. ಸಚಿವರ ಈ ಧೈರ್ಯ ಮತ್ತು ಕಾರ್ಯಕ್ರಮದ ಬಗೆಗಿನ ಬದ್ಧತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Edited By :
PublicNext

PublicNext

15/06/2026 02:35 pm

Cinque Terre

9.63 K

Cinque Terre

2