ನವದೆಹಲಿ: ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಪಿಸಿಐ) ಸದ್ಯ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಎನ್‌ಡಿಎಗೆ ಬೆಂಬಲ ನೀಡುವ ಉದ್ದೇಶದಿಂದ ಟಿಎಂಸಿಯ 20 ಬಂಡಾಯ ಸಂಸದರು ಈ ಪಕ್ಷದೊಂದಿಗೆ ವಿಲೀನಗೊಳ್ಳುವ ಸಾಧ್ಯತೆ ಇದೆ.
ತ್ರಿಪುರಾ ಮೂಲದ ಎನ್‌ಪಿಸಿಐ, ನೋಂದಾಯಿತವಾಗಿದ್ದರೂ ಮಾನ್ಯತೆ ಪಡೆಯದ ರಾಜಕೀಯ ಪಕ್ಷವಾಗಿದೆ. 2023ರಲ್ಲಿ ಪಶ್ಚಿಮ ಬಂಗಾಳದಲ್ಲಿ ನೋಂದಣಿಗೊಂಡ ಈ ಪಕ್ಷ, ಅದೇ ವರ್ಷ ತ್ರಿಪುರಾ ಚುನಾವಣೆಯಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿತ್ತು. ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ, ಅದರ ಯಾವ ಅಭ್ಯರ್ಥಿಯೂ ಗೆಲುವಿನ ಸನಿಹಕ್ಕೂ ತಲುಪಿರಲಿಲ್ಲ.
ಇಂತಹ ಹಿನ್ನೆಲೆಯುಳ್ಳ ಎನ್‌ಪಿಸಿಐ, ಈಗ ಈ ದೊಡ್ಡ ಪ್ರಮಾಣದ ವಿಲೀನದ ಮೂಲಕ ನೇರವಾಗಿ ಸಂಸತ್ತನ್ನು ಪ್ರವೇಶಿಸಲು ಸಜ್ಜಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
PublicNext
15/06/2026 03:59 pm
LOADING...