ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ, ಆರ್‌ಎಸ್‌ಎಸ್ 'ವಿಷಕಾರಿ ಹಾವು' ಎಂದ ಖರ್ಗೆ: ರಾಷ್ಟ್ರ ರಾಜಕಾರಣದಲ್ಲಿ ಜೋರಾದ ವಾಗ್ವಾದ!

ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಯನ್ನು 'ವಿಷಕಾರಿ ಹಾವು'ಗಳಿಗೆ ಹೋಲಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಈಗ ದೇಶಾದ್ಯಂತ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಚುನಾವಣಾ ರ‍್ಯಾಲಿಯೊಂದರಲ್ಲಿ ಖರ್ಗೆ ಆಡಿರುವ ಮಾತುಗಳು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ತೀವ್ರ ವಾಗ್ದಾಳಿಗೆ ಕಾರಣವಾಗಿದೆ.

​ಅಸ್ಸಾಂನ ನೀಲಾಂಬಜಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಖರ್ಗೆ ಅವರು ಕುರಾನ್‌ನಲ್ಲಿನ ಉಲ್ಲೇಖವೊಂದನ್ನು ಉದಾಹರಿಸುತ್ತಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ನಮಾಜ್ ಅಥವಾ ಪ್ರಾರ್ಥನೆ ಮಾಡುವಾಗ ವಿಷಕಾರಿ ಹಾವೊಂದು ಎದುರಿಗೆ ಬಂದರೆ, ಮೊದಲು ಪ್ರಾರ್ಥನೆಯನ್ನು ನಿಲ್ಲಿಸಿ ಆ ಹಾವನ್ನು ಕೊಲ್ಲಬೇಕು. ಹಾಗೆಯೇ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೂಡ ದೇಶಕ್ಕೆ ವಿಷಕಾರಿ ಹಾವಿನಂತೆ. ದೇಶವನ್ನು ರಕ್ಷಿಸಲು ಇವುಗಳನ್ನು ರಾಜಕೀಯವಾಗಿ ಮುಗಿಸಬೇಕು" ಎಂದು ಹೇಳಿಕೆ ನೀಡಿದ್ದಾರೆ.

​ಬಿಜೆಪಿ ತೀವ್ರ ಆಕ್ರೋಶ; ಅಮಿತ್ ಶಾ ತಿರುಗೇಟು

ಖರ್ಗೆ ಅವರ ಈ ಹೇಳಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಹಿರಿಯ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವವರನ್ನು ಸಾರ್ವಜನಿಕರು ರಾಜಕೀಯವಾಗಿ ನಿರ್ನಾಮ ಮಾಡಲಿದ್ದಾರೆ" ಎಂದು ಅಮಿತ್ ಶಾ ತಿರುಗೇಟು ನೀಡಿದ್ದಾರೆ.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, "ಖರ್ಗೆ ಅವರ ಮಾತುಗಳು ಕಾಂಗ್ರೆಸ್ ಪಕ್ಷದ ಸಂಕುಚಿತ ಮತ್ತು ದ್ವೇಷದ ರಾಜಕಾರಣವನ್ನು ತೋರಿಸುತ್ತವೆ. ಪ್ರಾರ್ಥನೆಯ ನೆಪದಲ್ಲಿ ನಿರ್ದಿಷ್ಟ ಸಮುದಾಯವನ್ನು ಪ್ರಚೋದಿಸುವ ಮೂಲಕ ಕಾಂಗ್ರೆಸ್ ದೇಶದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ" ಎಂದು ಆರೋಪಿಸಿದ್ದಾರೆ.

​ಚುನಾವಣಾ ಕಣ ರಂಗೇರಿರುವ ಬೆನ್ನಲ್ಲೇ ಉಭಯ ಪಕ್ಷಗಳ ನಾಯಕರ ನಡುವಿನ ಈ 'ವಿಷಕಾರಿ ಹಾವು' ಸಂಘರ್ಷ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Edited By : Abhishek Kamoji
PublicNext

PublicNext

15/06/2026 04:26 pm

Cinque Terre

2.64 K

Cinque Terre

0

ಸಂಬಂಧಿತ ಸುದ್ದಿ