ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಭವಿಷ್ಯಕ್ಕೆ ಬ್ರಿಟನ್ ಮಹತ್ವದ ಹೆಜ್ಜೆ: 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮಕ್ಕೆ ನಿಷೇಧ!

ಲಂಡನ್: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವುದಾಗಿ ಯುನೈಟೆಡ್ ಕಿಂಗ್‌ಡಮ್ (ಯುಕೆ) ಘೋಷಿಸಿದೆ. ಮಕ್ಕಳ ಯೋಗಕ್ಷೇಮವನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಕೀರ್ ಸ್ಟಾರ್ಮರ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ನಂತರ ಇಂತಹ ನಿಷೇಧವನ್ನು ಘೋಷಿಸಿದ ವಿಶ್ವದ ನಾಲ್ಕನೇ ದೇಶ ಬ್ರಿಟನ್ ಆಗಿದೆ. ಟಿಕ್‌ಟಾಕ್, ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್, ರೆಡ್ಡಿಟ್, ಟ್ವಿಚ್, ಎಕ್ಸ್, ಥ್ರೆಡ್ಸ್, ಫೇಸ್‌ಬುಕ್ ಮತ್ತು ಕಿಕ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಈ ನಿಷೇಧ ಅನ್ವಯವಾಗುವ ನಿರೀಕ್ಷೆಯಿದೆ.

Edited By : Vijay Kumar
PublicNext

PublicNext

15/06/2026 03:51 pm

Cinque Terre

1.32 K

Cinque Terre

1

ಸಂಬಂಧಿತ ಸುದ್ದಿ