ಗೌರಿಬಿದನೂರು : ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದ ಗ್ರಾಮಾಂತರ ಪೊಲೀಸ್ ಠಾಣೆಯ ಆವರಣದಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಸಿ, ಖಡಕ್ ಎಚ್ಚರಿಕೆ ನೀಡಲಾಯಿತು.
ಇನ್ನು ಪರೇಡ್ ನೇತೃತ್ವ ವಹಿಸಿ ರೌಡಿಶೀಟರ್‌ಗಳ ಹಿನ್ನೆಲೆ ಹಾಗೂ ಸದ್ಯದ ಚಟುವಟಿಕೆಗಳನ್ನು ಪರಿಶೀಲಿಸಿದ ವೃತ್ತ ನಿರೀಕ್ಷಕ ಅಂಜನ್ ಕುಮಾರ್ ಅವರು ಮಾತನಾಡುತ್ತಾ, ಪ್ರತಿಯೊಬ್ಬ ರೌಡಿಶೀಟರ್‌ನ ಚಲನವಲನಗಳ ಮೇಲೆ ನಿರಂತರ ನಿಗಾ ಇಡಲು ವಿಶೇಷ ಸ್ಕ್ವಾಡ್ ರಚಿಸಲಾಗಿದೆ ಎಂದು ತಿಳಿಸಿದರು. ರೌಡಿಶೀಟರ್‌ಗಳ ಚಟುವಟಿಕೆಗಳನ್ನು ಗಮನಿಸಲು ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಪ್ರತಿ ವಾರವೂ ನಿಮ್ಮನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ನಿಮ್ಮ ಪ್ರತಿಯೊಂದು ಮೂವ್‌ಮೆಂಟ್ ನಮಗೆ ತಿಳಿಯುತ್ತಿರುತ್ತದೆ ಎಂದು ಎಚ್ಚರಿಸಿದರು.
ಇನ್ನು ಪರೇಡ್‌ನಲ್ಲಿ ಹಾಜರಿದ್ದ ಎಲ್ಲಾ ರೌಡಿಶೀಟರ್‌ಗಳ ಪ್ರಸ್ತುತ ಕೆಲಸ, ಜೀವನೋಪಾಯದ ಮಾರ್ಗ, ಕುಟುಂಬದ ಸದಸ್ಯರ ವಿವರಗಳು, ಆಧಾರ್ ಕಾರ್ಡ್ ಸೇರಿದಂತೆ ಪ್ರಸ್ತುತ ವಿಳಾಸದ ದಾಖಲೆಗಳು ಹಾಗೂ ಇತ್ತೀಚಿನ ಇಂಟ್ರೋಗೇಷನ್ ವರದಿಯನ್ನು ಪೊಲೀಸರು ಪಡೆದುಕೊಂಡು, ಸೂಕ್ತ ಮಾಹಿತಿಗಳನ್ನು ನವೀಕರಿಸಿಕೊಂಡರು.
ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
PublicNext
16/06/2026 08:04 pm
LOADING...