ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಬೀಡಿ ಕಿಡಿ ತಾಗಿ ಹೊತ್ತಿ ಉರಿದ ಕೊಟ್ಟಿಗೆ - ವೃದ್ಧ ಸಾವು!

ದಾವಣಗೆರೆ: ಬೀಡಿ ಸೇದಿ ದನದ ಕೊಟ್ಟಿಗೆಯಲ್ಲಿ ಮಲಗಿದ್ದ ವೃದ್ಧನಿಗೆ ಆಕಸ್ಮಿಕ ಬೆಂಕಿ ತಗುಲಿ ಮೃತಪಟ್ಟ ದಾರುಣ ಘಟನೆ ಚನ್ನಗಿರಿ ತಾಲೂಕಿನ ಶೃಂಗಾರಬಾಗ್ ತಾಂಡಾದಲ್ಲಿ ನಡೆದಿದೆ ಶೃಂಗಾರಬಾಗ್ ಗ್ರಾಮದ ರೇಖ್ಯಾನಾಯ್ಕ (68) ಮೃತ ವ್ಯಕ್ತಿ. ತಡರಾತ್ರಿ ಊಟ ಮುಗಿಸಿ ತಮ್ಮ ಕಣದಲ್ಲಿನ ದನದ ಕೊಟ್ಟಿಗೆಯಲ್ಲಿ ರೇಖ್ಯಾನಾಯ್ಕ ಮಲಗಿದ್ದರು. ಇವರಿಗೆ ಬೀಡಿ ಸೇದುವ ಅಭ್ಯಾಸವಿತ್ತು. ರಾತ್ರಿ ಬೀಡಿ ಸೇದಿ ಪಕ್ಕದಲ್ಲೇ ಎಸೆದು ಮಲಗಿದ್ದಾರೆ.

ಬೆಂಕಿ ಕಿಡಿ ಹೊತ್ತಿ ಕೊಟ್ಟಿಗೆ ಹೊತ್ತಿ ಉರಿದಿದೆ. ಕೊಟ್ಟಿಗೆಗೆ ಬೆಂಕಿಹೊತ್ತಿಕೊಂಡು ಉರಿಯುವುದು ಕಂಡು ಮೃತನ ಮಗ ವಸಂತನಾಯ್ಕ ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ರೇಖ್ಯಾನಾಯ್ಕ ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.

ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಗ್ರಾಮಸ್ಥರ ಸಹಾಯದಿಂದ ಬೆಂಕಿ ನಂದಿಸಲಾಗಿದೆ. ಬಿದಿರಿನಿಂದ ನಿರ್ಮಿಸಿದ್ದ ಕೊಟ್ಟಿಗೆಯ ಛಾವಣಿ ಸಂಪೂರ್ಣ ಸುಟ್ಟಿದ್ದು, ಕೊಟ್ಟಿಗೆಯಲ್ಲಿದ್ದ ಸಾಮಾನುಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

Edited By :
Kshetra Samachara

Kshetra Samachara

16/06/2026 10:38 pm

Cinque Terre

5.55 K

Cinque Terre

0