ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಖಾಸಗೀಕರಣ ನಮಗೆ ಮರಣ ಶಾಸನ - ಮೆಸ್ಕಾಂ ಸಿಬ್ಬಂದಿಯ ಆಕ್ರೋಶ!

ಚಿಕ್ಕಮಗಳೂರು: ವಿದ್ಯುತ್ ವಲಯದ ಖಾಸಗೀಕರಣದ ನಿರ್ಧಾರವನ್ನು ಕೆಪಿಟಿಸಿಎಲ್ ಮತ್ತು ವಿವಿಧ ವಿದ್ಯುತ್ ಸರಬರಾಜು ಕಂಪನಿಗಳ ನೌಕರರ ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತಿವೆ. ಖಾಸಗೀಕರಣದ ನೀತಿಯನ್ನು ಖಂಡಿಸಿ ಚಿಕ್ಕಮಗಳೂರಿನ ಮೆಸ್ಕಾಂ ಕಚೇರಿ ಎದುರು ಮೆಸ್ಕಾಂ ಸಿಬ್ಬಂದಿ, ನೌಕರರು ಹಾಗೂ ಗುತ್ತಿಗೆದಾರರು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸಿದರು.

ಇಲಾಖೆಯ ವಿವಿಧ ಒಕ್ಕೂಟಗಳಾದ ನಿವೃತ್ತ ನೌಕರರ ಸಂಘ, ಕಾಂಟ್ರಾಕ್ಟ್ ಅಸೋಸಿಯೇಷನ್, ಎಒ ಅಸೋಸಿಯೇಷನ್, ಇಂಜಿನಿಯರ್ಸ್ ಮತ್ತು ಡಿಪ್ಲೊಮಾ ಅಸೋಸಿಯೇಷನ್ ಸೇರಿದಂತೆ ಎಲ್ಲಾ ಸಂಘಟನೆಗಳು ಒಟ್ಟಾಗಿ ಈ ಹೋರಾಟಕ್ಕೆ ಧುಮುಕಿವೆ. ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿರುವ ಯುವ ನೌಕರರಿಂದ ಹಿಡಿದು ನಿವೃತ್ತರಾಗುತ್ತಿರುವ ಎಲ್ಲಾ ಉದ್ಯೋಗಿಗಳಿಗೂ ಇದರಿಂದ ಭಾರಿ ಅನ್ಯಾಯವಾಗಲಿದ್ದು, ಇದು ಇಡೀ ನೌಕರರ ನೌಕರರ ಮರಣ ಶಾಸನವಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ಹೊರಹಾಕಿದರು.

ಕೋವಿಡ್‌ನಂತಹ ಕಠಿಣ ಹಾಗೂ ಕಷ್ಟದ ಕಾಲದಲ್ಲೂ ಜೀವದ ಹಂಗು ತೊರೆದು ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಸೇವೆ ನೀಡಿದ್ದು ಇಲಾಖೆಯು ಸದ್ಯ ಅತ್ಯುತ್ತಮ ಸ್ಥಿತಿಯಲ್ಲಿದ್ದಾಗ ಇದನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಉದ್ದೇಶವಾದರೂ ಏನು? ಇದರ ಹಿಂದೆ ದೊಡ್ಡ ಸಂಚು ಅಡಗಿದೆ. ಯಾವುದೇ ಕಾರಣಕ್ಕೂ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡಬಾರದು ಎಂದು ನೌಕರರ ಆಕ್ರೋಶ ಹೊರ ಹಾಕಿದ್ದಾರೆ.

Edited By :
PublicNext

PublicNext

17/06/2026 08:24 am

Cinque Terre

12.76 K

Cinque Terre

0

ಸಂಬಂಧಿತ ಸುದ್ದಿ