ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ: 2,000 ಮೇಲ್ಪಟ್ಟ UPI ಪಾವತಿಗೆ ಶುಲ್ಕ: ಲೋಕಸಭೆಯಲ್ಲಿ ಮಸೂದೆ ಪಾಸ್!

ನವದೆಹಲಿ: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. UPI ಸೇರಿದಂತೆ ವಿವಿಧ ಡಿಜಿಟಲ್ ಪಾವತಿ ವ್ಯವಸ್ಥೆಗಳ ಮೇಲೆ ಭವಿಷ್ಯದಲ್ಲಿ ಶುಲ್ಕ (MDR) ವಿಧಿಸಲು ಕೇಂದ್ರ ಸರ್ಕಾರಕ್ಕೆ ಕಾನೂನುಬದ್ಧ ಅಧಿಕಾರ ನೀಡುವ ತೆರಿಗೆ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ–2026 ಧ್ವನಿಮತದ ಮೂಲಕ ಅಂಗೀಕಾರವಾಗಿದೆ.

ಸದನದಲ್ಲಿ ಗದ್ದಲದ ನಡುವೆಯೇ ಮಧ್ಯಾಹ್ನ ಕಲಾಪ ಪುನರಾರಂಭವಾದ ಬಳಿಕ ಯಾವುದೇ ಚರ್ಚೆಯಿಲ್ಲದೆ ಮಸೂದೆಗೆ ಅನುಮೋದನೆ ನೀಡಲಾಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಮಸೂದೆಯನ್ನು ಮಂಡಿಸಿದ್ದರು.

ಈ ತಿದ್ದುಪಡಿಯು 2007ರ Payment and Settlement Systems Actನ ಸೆಕ್ಷನ್ 10ಎಗೆ ಸಂಬಂಧಿಸಿದೆ. ಇದುವರೆಗೆ ಡಿಜಿಟಲ್ ಪಾವತಿಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲು ಕಾನೂನುಬದ್ಧ ನಿರ್ಬಂಧವಿತ್ತು. ಹೊಸ ತಿದ್ದುಪಡಿಯಿಂದ ಸರ್ಕಾರ ಅಗತ್ಯವೆಂದು ಕಂಡರೆ ಅಧಿಸೂಚನೆ ಹೊರಡಿಸಿ ಆಯ್ದ ಡಿಜಿಟಲ್ ಪಾವತಿ ವಿಧಾನಗಳ ಮೇಲೆ MDR ಜಾರಿಗೆ ತರಲು ಅವಕಾಶ ಸಿಗಲಿದೆ.

ಸರ್ಕಾರದ ಪ್ರಾಥಮಿಕ ಚಿಂತನೆಯ ಪ್ರಕಾರ, ₹2,000ಕ್ಕಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಶೇ.0.3ರಿಂದ ಶೇ.0.5ರವರೆಗೆ MDR ವಿಧಿಸುವ ಸಾಧ್ಯತೆ ಇದೆ. ಆದರೆ ಈ ಶುಲ್ಕ ಗ್ರಾಹಕರಿಗೆ ಅಲ್ಲ, ಡಿಜಿಟಲ್ ಪಾವತಿ ಸ್ವೀಕರಿಸುವ ವ್ಯಾಪಾರಿಗಳು (Merchants) ಪಾವತಿಸುವ ಶುಲ್ಕವಾಗಿರುತ್ತದೆ.

ಈ ಮಸೂದೆ ಅಂಗೀಕಾರವಾದ ತಕ್ಷಣವೇ UPI ವ್ಯವಹಾರಗಳಿಗೆ ಶುಲ್ಕ ಜಾರಿಗೆ ಬರುವುದಿಲ್ಲ. ಕೇಂದ್ರ ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಿದ ಬಳಿಕ ಮಾತ್ರ ಬ್ಯಾಂಕುಗಳು ಹಾಗೂ ಪಾವತಿ ಸೇವಾ ಸಂಸ್ಥೆಗಳು MDR ವಿಧಿಸಲು ಸಾಧ್ಯವಾಗುತ್ತದೆ. ಅಲ್ಲಿಯವರೆಗೆ UPI ವಹಿವಾಟುಗಳು ಹಿಂದಿನಂತೆ ಉಚಿತವಾಗಿಯೇ ಮುಂದುವರಿಯಲಿವೆ.

Edited By :
PublicNext

PublicNext

06/08/2026 06:21 pm

Cinque Terre

30.37 K

Cinque Terre

12

ಸಂಬಂಧಿತ ಸುದ್ದಿ