ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತ್ರಿಕೋನ ಪ್ರೇಮ ದುರಂತ : ಖಾಸಗಿ ಫೋಟೋ ವೈರಲ್ ಬೆದರಿಕೆಗೆ ಟೆಕ್ಕಿ ಆತ್ಮಹತ್ಯೆ - ಇಬ್ಬರ ವಿರುದ್ಧ ದೂರು

ಬಳ್ಳಾರಿ: ತ್ರಿಕೋನ ಪ್ರೇಮದ ಹಿನ್ನೆಲೆ ಮಾನಸಿಕ ಕಿರುಕುಳ ಮತ್ತು ಖಾಸಗಿ ಫೋಟೋ ವೈರಲ್ ಮಾಡುವ ಬೆದರಿಕೆ ಆರೋಪದ ನಡುವೆ ಯುವ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಫಿರ್ದೋಸ್ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಫಿರ್ದೋಸ್ ಅವರು ಕೌಲ್ ಬಜಾರ್ ನಿವಾಸಿ ಅಜೀಂ ಅವರನ್ನು ಪ್ರೀತಿಸುತ್ತಿದ್ದರು. ಬಳಿಕ ಅವರ ನಡುವಿನ ಸಂಬಂಧ ಹದಗೆಟ್ಟಿದ್ದು, ಅಜೀಂನಿಂದ ದೂರವಾಗಿದ್ದರು ಎನ್ನಲಾಗಿದೆ. ನಂತರ ಅಜೀಂನ ಸ್ನೇಹಿತ ಸೋಹೈಲ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಫಿರ್ದೋಸ್, ಮದುವೆಯಾಗಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.

ಈ ವಿಚಾರ ತಿಳಿದ ಬಳಿಕ, ಅಜೀಂ ತನ್ನೊಂದಿಗೆ ಇರುವ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬೆಳವಣಿಗೆಯಿಂದ ತೀವ್ರ ಮಾನಸಿಕವಾಗಿ ನೊಂದಿದ್ದ ಫಿರ್ದೋಸ್, ಆತ್ಮಹತ್ಯೆಗೂ ಮುನ್ನ ವಿಡಿಯೋ ದಾಖಲಿಸಿ, ತಮ್ಮ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಆತ್ಮಹತ್ಯೆಗೆ ಮುನ್ನ ಫಿರ್ದೋಸ್ ಅವರು ಸೋಹೈಲ್‌ಗೆ ಕರೆ ಮಾಡಿ, ಅಜೀಂನಿಂದ ಎದುರಿಸುತ್ತಿದ್ದ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಮೃತೆಯ ಕುಟುಂಬದವರು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಾದ ಅಜೀಂ ಮತ್ತು ಸೋಹೈಲ್ ಇಬ್ಬರೂ ಸದ್ಯ ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Edited By :
PublicNext

PublicNext

05/08/2026 10:31 pm

Cinque Terre

23.5 K

Cinque Terre

0

ಸಂಬಂಧಿತ ಸುದ್ದಿ