ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್‌ ಅಧಿಕಾರಿಯಾದ್ರೂ ಗೆಳೆಯನನ್ನು ಅಪ್ಪಿ ಸಂಭ್ರಮಿಸುವ ಅಪರೂಪದ ಬಂಧ ಈ ಸ್ನೇಹದ ಅನುಬಂಧ

"ಜೀವನದಲ್ಲಿ ಹುದ್ದೆಗಳು ಬದಲಾಗಬಹುದು... ಅಧಿಕಾರ ಹೆಚ್ಚಾಗಬಹುದು... ಭುಜದ ಮೇಲೆ ಸ್ಟಾರ್‌ಗಳು ರಾರಾಜಿಸಬಹುದು ಆದರೆ ನಿಜವಾದ ಸ್ನೇಹ ಎಂದಿಗೂ ಬದಲಾಗುವುದಿಲ್ಲ" ಎಂಬುದಕ್ಕೆ ಸಾಕ್ಷಿ ಎನ್ನುವಂತಹ ಹೃದಯಸ್ಪರ್ಶಿ ಸ್ನೇಹದ ಬಂಧವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಗೆಲ್ಲುತ್ತಿದೆ.

ಹೌದು ಒಬ್ಬ ಗೆಳೆಯ ಕಷ್ಟಪಟ್ಟು ಓದಿ, ಶ್ರಮವಹಿಸಿ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರೆ, ಮತ್ತೊಬ್ಬ ಬಾಲ್ಯದ ಗೆಳೆಯ ದೈಹಿಕ ಅಸಹಾಯಕತೆ ಮತ್ತು ಅನಾರೋಗ್ಯದ ಕಾರಣದಿಂದ ಅದೇ ಹಳೆಯ ಸ್ಥಿತಿಯಲ್ಲೇ ಉಳಿದುಕೊಂಡಿದ್ದ.

ಸಾಮಾನ್ಯವಾಗಿ ಅಧಿಕಾರ, ಹುದ್ದೆ ಮತ್ತು ಸ್ಥಾನಮಾನಗಳು ಬಂದಾಗ ಮನುಷ್ಯನ ನಡವಳಿಕೆ ಹಾಗೂ ಸಂಬಂಧಗಳು ಬದಲಾಗುವುದು ಸಹಜ. ಆದರೆ ಇಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ಆ ಅಧಿಕಾರಿಗೆ ತನ್ನ ಬಾಲ್ಯದ ಗೆಳೆಯನಿಗಿಂತ ದೊಡ್ಡ ಹುದ್ದೆ ಮತ್ತೊಂದಿರಲಿಲ್ಲ. ಸಮಯ ಸಿಕ್ಕಾಗಲೆಲ್ಲಾ ತನ್ನ ಗೆಳೆಯನನ್ನು ಹುಡುಕಿಕೊಂಡು ಓಡೋಡಿ ಬರುತ್ತಾರೆ. ಸಮವಸ್ತ್ರದ ಗತ್ತಾಗಲಿ, ಹುದ್ದೆಯ ಅಹಂಕಾರವಾಗಲಿ ಇವರ ನಡುವೆ ಎಂದಿಗೂ ಗೋಡೆಯಾಗಿ ನಿಂತಿಲ್ಲ.

ದೈಹಿಕವಾಗಿ ಅಸಹಾಯಕನಾಗಿರುವ ಗೆಳೆಯನಿಗೆ ಇಂದಿಗೂ ತನ್ನ ಪೊಲೀಸ್‌ ಸ್ನೇಹಿತನನ್ನು ಬಿಗಿದಪ್ಪಿಕೊಳ್ಳುವ ಮುಕ್ತ ಹಕ್ಕಿದೆ. ಪೊಲೀಸ್ ಅಧಿಕಾರಿಯಾದ ಗೆಳೆಯನೂ ಕೂಡ ತನ್ನ ಸ್ನೇಹಿತನನ್ನು ಅಷ್ಟೇ ಪ್ರೀತಿಯಿಂದ ಅಪ್ಪಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

"ಸಮಯ ಖಂಡಿತ ಬದಲಾಗಿದೆ, ಪರಿಸ್ಥಿತಿಗಳೂ ಬದಲಾಗಿವೆ... ಆದರೆ ಕಾಲವೇ ಸೋತು ನಿಲ್ಲುವಂತಹ ಈ ಅಪರೂಪದ ಸ್ನೇಹ ಮಾತ್ರ ಇಂದಿಗೂ ಹಾಗೆಯೇ ಜೀವಂತವಾಗಿದೆ." ಹುದ್ದೆ-ಅಧಿಕಾರಕ್ಕಿಂತಲೂ ಸ್ನೇಹವೇ ದೊಡ್ಡದು..

Edited By :
PublicNext

PublicNext

05/08/2026 02:50 pm

Cinque Terre

21.17 K

Cinque Terre

3

ಸಂಬಂಧಿತ ಸುದ್ದಿ