ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷಗಳ ಆಡಳಿತ ನಡೆಸಿದರೂ ಪ್ರತಿಪಕ್ಷಗಳು ಆರೋಪಿಸುವಂತೆ 'ಸರ್ವಾಧಿಕಾರಿ' ಆಗಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಜೆಪಿ ನಾಯಕ ಶಹಜಾದ್ ಪೂನಾವಾಲಾ ತಮ್ಮ ‘ಎಕ್ಸ್’ (X) ಖಾತೆಯಲ್ಲಿ ವ್ಯಂಗ್ಯಾತ್ಮಕ ವೀಡಿಯೋ ಹಂಚಿಕೊಳ್ಳುವ ಮೂಲಕ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ತಮ್ಮ ವಿರುದ್ಧ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ನಿಂದನೀಯ ಪದ ಬಳಸಿದ್ದ ಯುವಕರನ್ನು ಪ್ರಧಾನಿ ಮೋದಿ ಕ್ಷಮಿಸಿ, ಅವರಿಗೆ ಸರಿ ದಾರಿ ತೋರಿಸಬೇಕು ಎಂದು ಮನವಿ ಮಾಡಿದ್ದರು. ಈ ವೀಡಿಯೋ ಸಂದೇಶಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಮಾತನಾಡಿದ ಶಹಜಾದ್ ಪೂನಾವಾಲಾ, ಮೋದಿ ಅವರು ವಿಪಕ್ಷಗಳು ಹೇಳುವಂತೆ ಸರ್ವಾಧಿಕಾರಿಯಾಗಿದ್ದರೆ ನಿಂದಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಆಡಳಿತವಿರುವ ಕೇರಳ ಹಾಗೂ ಕರ್ನಾಟಕಗಳಲ್ಲಿ ರಾಹುಲ್ ಗಾಂಧಿ ಅಥವಾ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿದವರ ಮೇಲೆ ತಕ್ಷಣ ಎಫ್‌ಐಆರ್ ದಾಖಲಿಸಲಾಗುತ್ತದೆ. ನೆಹರೂ ಹಾಗೂ ಇಂದಿರಾ ಗಾಂಧಿ ಅವರ ಕಾಲದ ತುರ್ತು ಪರಿಸ್ಥಿತಿಯನ್ನು ನೆನಪಿಸಿದ ಅವರು, ನೈಜ ಸರ್ವಾಧಿಕಾರ ಎಂದರೆ ಏನು ಎಂಬುದನ್ನು ಕಾಂಗ್ರೆಸ್ ನಾಯಕರಿಂದ ಕಲಿಯಬೇಕು ಎಂದು ಚಾಟಿ ಬೀಸಿದ್ದಾರೆ.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಪ್ರತಿಪಕ್ಷ-ಆಡಳಿತ ಪಕ್ಷಗಳ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ.
PublicNext
05/08/2026 07:53 am
LOADING...