"ಬಾಲ್ಯದಲ್ಲಿ ಅಮ್ಮ ನನ್ನ ಬೆರಳು ಹಿಡಿದು ನಡೆಯುವುದನ್ನು ಕಲಿಸಿದರು... ಇಂದು ನಾನು ನನ್ನ ತಾಯಿಯನ್ನು ಜೀವನದ ಪಯಣದಲ್ಲಿ ಸಾಗಿಸುತ್ತಿದ್ದೇನೆ" ಎಂಬ ಭಾವನೆ ಮೂಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ವೃದ್ಧ ತಾಯಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಪ್ರಯಾಣಿಸುತ್ತಿರುವುದು ಕಾಣಿಸುತ್ತದೆ. ಯಾವುದೇ ವಾಹನದ ಸೌಲಭ್ಯ ಇಲ್ಲದ ಕಾರಣ, ಪ್ರಯಾಣದ ವೇಳೆ ತಾಯಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ತನ್ನೊಂದಿಗೆ ಕಟ್ಟಿಕೊಂಡು ಕರೆದೊಯ್ಯುತ್ತಿರುವ ದೃಶ್ಯ ಅನೇಕರ ಮನ ಗೆದ್ದಿದೆ.
ಈ ವಿಡಿಯೋ ಹಣ ಅಥವಾ ಐಶಾರಾಮಿ ಸೌಲಭ್ಯಗಳಿಗಿಂತ ಹೆತ್ತವರ ಮೇಲಿನ ಪ್ರೀತಿ, ಗೌರವ ಮತ್ತು ಕಾಳಜಿಯೇ ನಿಜವಾದ ಸಂಪತ್ತು ಎಂಬ ಸಂದೇಶವನ್ನು ಸಾರುತ್ತಿದೆ. ವೃದ್ಧಾಪ್ಯದಲ್ಲಿ ತಾಯಿಗೆ ಮಗನೊಬ್ಬ ಆಸರೆಯಾಗಿರುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ನೆಟ್ಟಿಗರು, "ಹೆತ್ತವರಿಗೆ ಸೇವೆ ಸಲ್ಲಿಸಲು ಅಪಾರ ಸಂಪತ್ತು ಬೇಕಾಗಿಲ್ಲ; ನಿಜವಾದ ಪ್ರೀತಿ ಮತ್ತು ಮನಸ್ಸು ಸಾಕು. ಇಂತಹ ಮಕ್ಕಳು ಪ್ರತಿಯೊಬ್ಬ ತಾಯಿಯ ಹೆಮ್ಮೆ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.
PublicNext
05/08/2026 10:27 pm
LOADING...