ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈದರಾಬಾದ್ : ನಿಮ್ಮ ಅಡುಗೆ ಮನೆಯ ಮಸಾಲೆ ಪದಾರ್ಥಗಳು ಶುದ್ಧವೇ - ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ ಕಮಿಷನರ್ ವಿ.ಸಿ. ಸಜ್ಜನರ್

ಹೈದರಾಬಾದ್ : ದಿನನಿತ್ಯದ ಅಡುಗೆಯಲ್ಲಿ ಬಳಸುವ ಮಸಾಲೆಗಳಲ್ಲಿ ಕಲಬೆರಕೆ ಇದೆಯೇ ಎಂಬುದನ್ನು ಸರಳ ವಿಧಾನದಲ್ಲಿ ಪತ್ತೆಹಚ್ಚುವುದು ಹೇಗೆ ಎಂಬುದನ್ನು ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಪ್ರತಿಯೊಂದು ಆಹಾರ ಪದಾರ್ಥಗಳೂ ಕಲಬೆರಕೆಯಾಗುತ್ತಿದ್ದು, ಇದೇ ವಿಚಾರವಾಗಿ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಜನರಿಗೆ ಪ್ರಾತ್ಯಕ್ಷಿಕೆ ಮೂಲಕ ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ ಇದೆಯೇ ಎಂಬುದನ್ನು ಸರಳ ವಿಧಾನದಲ್ಲಿ ಪತ್ತೆಹಚ್ಚುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟರು ಮಸಾಲೆಗಳ ಗುಣಮಟ್ಟದ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಾತ್ಯಕ್ಷಿಕೆ ವೇಳೆ ಸಜ್ಜನರ್ ಅವರು ಶುದ್ಧ ಹಾಗೂ ಕಲಬೆರಕೆ ಮಾಡಿರುವ ಲವಂಗ, ಶಾಹಿಜೀರಾ ಮತ್ತು ಸೋಂಪು ಕಾಳುಗಳನ್ನು ಪ್ರತ್ಯೇಕ ಪಾರದರ್ಶಕ ಗ್ಲಾಸ್‌ಗಳಲ್ಲಿ ನೀರು ತುಂಬಿ ಹಾಕಿ ಪರೀಕ್ಷಿಸಿದರು. ರಾಸಾಯನಿಕ ಲೇಪನ ಮಾಡಿರುವ ಕಲಬೆರಕೆ ಮಸಾಲೆಗಳನ್ನು ಹಾಕಿದ ನೀರಿನ ಬಣ್ಣ ಬಹುತೇಕ ತಕ್ಷಣವೇ ಬದಲಾಗಿತ್ತು. ಆದರೆ ಶುದ್ಧ ಮಸಾಲೆಗಳನ್ನು ಹಾಕಿದ ನೀರಿನ ಬಣ್ಣದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

Edited By :
PublicNext

PublicNext

05/08/2026 09:19 pm

Cinque Terre

9.87 K

Cinque Terre

0

ಸಂಬಂಧಿತ ಸುದ್ದಿ