ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಣೆ: ಪ್ರವಾಹದ ನೀರಲ್ಲಿ ರಸ್ತೆ ದಾಟುವ ದುಸ್ಸಾಹಸ: ಸ್ಥಳೀಯರಿಂದ ಹಿರಿಯ ವ್ಯಕ್ತಿಯ ರಕ್ಷಣೆ

ಪುಣೆ: ಪ್ರವಾಹದ ನೀರಿನ ಮಧ್ಯೆಯೇ ಹಿರಿಯ ನಾಗರಿಕನೊಬ್ಬ ರಸ್ತೆ ದಾಟುವ ದುಸ್ಸಾಹಸ ಮಾಡಿದ್ದ. ಆದರೆ, ಆತನನ್ನು ರಕ್ಷಣೆ ಮಾಡಿದ ಸ್ಥಳೀಯರು ಆತನ ಕೆನ್ನೆಗೆ ಬಾರಿಸಿ ಕೊನೆಗೆ ಆತನ ಬಳಿಯೇ ಕ್ಷಮೆ ಕೇಳಿದ್ದಾರೆ. ಇದು ಪುಣೆಯ ನಾರಾಯಣಗಾವ್‌ದಲ್ಲಿ ನಡೆದಿದೆ.

ಹರಿಯುತ್ತಿರುವ ಪ್ರವಾಹದ ನೀರಿನಲ್ಲೇ ಹಿರಿಯ ನಾಗರಿಕನೊಬ್ಬ ರಸ್ತೆ ದಾಟಲು ಯತ್ನಿಸಿದ್ದ. ಆದರೆ, ಆತನನ್ನು ಬಿಡದ ಸ್ಥಳೀಯರು ಆತನನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಅಲ್ಲದೇ ಸ್ಥಳದಲ್ಲೇ ಹಿರಿಯ ವ್ಯಕ್ತಿ ಎಂತಲೂ ನೋಡದೇ ಆತನ ಕೆನ್ನೆಗೆ ಓರ್ವ ವ್ಯಕ್ತಿ ಬಾರಿಸಿದ್ದಾನೆ. ಹಿರಿಯನ ಕೆನ್ನೆಗೆ ಬಾರಿಸಿದ ವ್ಯಕ್ತಿ ಕೊನೆಗೆ ಆ ಹಿರಿಯ ವ್ಯಕ್ತಿಯ ಬಳಿಯೇ ಕ್ಷಮೆ ಕೇಳಿದ್ದಾನೆ.

"ವೃದ್ಧನಿಗೆ ಹೊಡೆದದ್ದು ದುರದೃಷ್ಟಕರವಾದರೂ, ಆ ಪ್ರವಾಹದ ರಭಸಕ್ಕೆ ಆ ತಾತ ನೀರಿನಲ್ಲಿ ಕೊಚ್ಚಿಹೋಗಿ ಜೀವ ಕಳೆದುಕೊಂಡಿದ್ದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತಿತ್ತು. ಹಾಗೆನಾದರೂ ಆಗಿದ್ದರೆ ಅಲ್ಲಿ ನೋಡುಗರಾಗಿದ್ದ ಪ್ರತಿಯೊಬ್ಬರೂ ಜೀವಮಾನವಿಡೀ ಕೊರಗಬೇಕಾಗುತ್ತಿತ್ತು"

Edited By :
PublicNext

PublicNext

04/08/2026 10:05 pm

Cinque Terre

23.6 K

Cinque Terre

0

ಸಂಬಂಧಿತ ಸುದ್ದಿ