ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಹುಟ್ಟಿನಿಂದಲೇ ಅಂಧರಾಗಿದ್ದರೂ ದೃಷ್ಟಿ ನೀಡುತ್ತೇವೆ" - ಟೆಕ್ ಲೋಕದಲ್ಲಿ ಎಲಾನ್ ಮಸ್ಕ್ ಹೇಳಿಕೆ ಸಂಚಲನ

ವಾಷಿಂಗ್ಟನ್: ಹುಟ್ಟಿನಿಂದಲೇ ಕಣ್ಣಿನ ದೃಷ್ಟಿ ಇಲ್ಲದವರಿಗೂ ದೃಷ್ಟಿ ನೀಡಬಲ್ಲ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಉದ್ಯಮಿ ಎಲಾನ್ ಮಸ್ಕ್ ಬಿಗ್ ಅಪ್‌ಡೇಟ್ ನೀಡಿದ್ದು, ಅಂಧರ ಪಾಲಿಗೆ ಹೊಸ ಭರವಸೆಯ ಕಿರಣ ಮೂಡಿಸಿದೆ.

"ಮುಂದಿನ 6 ರಿಂದ 12 ತಿಂಗಳಲ್ಲಿ ನಾವು ಮೊದಲ 'ನ್ಯೂರೋಲಿಂಕ್' ದೃಷ್ಟಿ ಸಾಧನಗಳನ್ನು (Blindsight Device) ಮನುಷ್ಯರಿಗೆ ಅಳವಡಿಸಲು ಸಿದ್ಧರಿದ್ದೇವೆ. ನೀವು ಹುಟ್ಟಿನಿಂದಲೇ 100% ಅಂಧರಾಗಿದ್ದರೂ ಸಹ, ಈ ಸಾಧನವು ನೇರವಾಗಿ ನಿಮ್ಮ ಮಿದುಳಿನ 'ವಿಷುಯಲ್ ಕಾರ್ಟೆಕ್ಸ್' (Visual Cortex) ತಲುಪಲಿದ್ದು, ಇದರಿಂದ ನೀವು ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ" ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.

ಜಾನ್ ಎಫ್. ಕೆನಡಿ ಎಂಬುವವರು ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಲಾನ್ ಮಸ್ಕ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

"ಇದು ಕೇವಲ ಆರಂಭವಷ್ಟೇ. ದೀರ್ಘಾವಧಿಯಲ್ಲಿ ಈ ತಂತ್ರಜ್ಞಾನವು Ultra-HD ರೆಸಲ್ಯೂಶನ್ ಜೊತೆಗೆ ನಿಜವಾದ ಸೂಪರ್-ಪವರ್‌ಗಳನ್ನು ನೀಡಲಿದೆ. ಸಾಮಾನ್ಯ ಕಣ್ಣಿಗೆ ಕಾಣಿಸದ ಇನ್‌ಫ್ರಾರೆಡ್ (Infrared), ಅಲ್ಟ್ರಾವಯಲೆಟ್ (Ultraviolet) ಮತ್ತು ರೇಡಾರ್ ತರಂಗಗಳನ್ನೂ ನೀವು ನೇರವಾಗಿ ನೋಡಬಹುದು. ಅಕ್ಷರಶಃ ಸೂಪರ್‌ಹೀರೋ ತರಹ ನೋಡಲು ಸಾಧ್ಯವಾಗುತ್ತದೆ" ಎಂದು ಮಸ್ಕ್ ಬಣ್ಣಿಸಿದ್ದಾರೆ. ಅಲ್ಲದೆ, ಭವಿಷ್ಯವು ಇನ್ನು ಮುಂದೆ ಕೇವಲ ಸೈನ್ಸ್ ಫಿಕ್ಷನ್ (ವಿಜ್ಞಾನ ಕಲ್ಪನೆ) ಆಗಿ ಉಳಿದಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

Edited By :
PublicNext

PublicNext

04/08/2026 07:58 pm

Cinque Terre

13.36 K

Cinque Terre

1

ಸಂಬಂಧಿತ ಸುದ್ದಿ