ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹತಾಶ ತಾಯಿಯ ಮೌನ ಮನವಿ : ಮರಿ ಉಳಿಸಲು ಮನುಷ್ಯರ ಬಳಿ ಕೈಜೋಡಿಸಿದ ಕೋತಿ!

ನವದೆಹಲಿ: ತಾಯಿ ಪ್ರೀತಿಗೆ ಭಾಷೆಯೂ ಇಲ್ಲ, ಗಡಿಯೂ ಇಲ್ಲ ಎಂಬ ಸಂದೇಶ ಸಾರುವಂತ ಕೃತಕ ಬುದ್ದಿಮತ್ತೆಯಿಂದ ರೂಪಿಸಲಾದ ಭಾವನಾತ್ಮಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಾಯಿ ಕೋತಿಯೊಂದು ತನ್ನ ಮರಿಯನ್ನು ರಕ್ಷಿಸಲು ಅಪರಿಚಿತರ ಬಳಿ ನೆರವು ಕೋರುವ ದೃಶ್ಯ ಅನೇಕರ ಮನಸ್ಸು ಮುಟ್ಟಿದೆ.

ವಿಡಿಯೋದಲ್ಲಿ ತಾಯಿ ಕೋತಿ ಯಾವುದೇ ಆಕ್ರಮಣಕಾರಿ ವರ್ತನೆ ತೋರದೆ, ತನ್ನ ಮರಿ ಸಂಕಷ್ಟದಲ್ಲಿದೆ ಎಂಬ ಆತಂಕದಿಂದ ನೇರವಾಗಿ ಮನುಷ್ಯರ ಬಳಿಗೆ ಬರುತ್ತದೆ. ತನ್ನ ಮರಿಗೆ ಸಹಾಯ ಮಾಡುವಂತೆ ಮೌನವಾಗಿ ಮನವಿ ಮಾಡುತ್ತಿರುವಂತೆ ದೃಶ್ಯ ಮೂಡಿಬಂದಿದೆ.

ಸಾಮಾನ್ಯವಾಗಿ ಕಾಡುಪ್ರಾಣಿಗಳು ಅಪಾಯದ ಸಂದರ್ಭದಲ್ಲಿ ಮನುಷ್ಯರಿಂದ ದೂರ ಓಡುವುದು ಅಥವಾ ರಕ್ಷಣಾತ್ಮಕವಾಗಿ ವರ್ತಿಸುವುದು ಸಹಜ. ಆದರೆ ಈ ದೃಶ್ಯದಲ್ಲಿ ತಾಯಿ ಕೋತಿ ತನ್ನ ಮರಿಯ ಜೀವವೇ ಮುಖ್ಯ ಎಂಬ ಭಾವನೆಯೊಂದಿಗೆ ಮನುಷ್ಯರ ಮೇಲೆ ನಂಬಿಕೆ ಇಟ್ಟಿರುವಂತೆ ಚಿತ್ರಿಸಲಾಗಿದೆ.

ಈ ವಿಡಿಯೋ ತಾಯ್ತನದ ಮತ್ತೊಂದು ಮುಖವನ್ನು ನೆನಪಿಸುತ್ತದೆ. ಕೆಲವೊಮ್ಮೆ ತಾಯಿಯ ದೊಡ್ಡ ಶಕ್ತಿ ತನ್ನಿಂದ ಮಾತ್ರ ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಂಡು ನೆರವು ಕೇಳುವುದಲ್ಲಿಯೂ ಅಡಗಿರುತ್ತದೆ ಎಂಬ ಸಂದೇಶವನ್ನು ಇದು ಸಾರುತ್ತದೆ.

Edited By :
PublicNext

PublicNext

05/08/2026 10:27 pm

Cinque Terre

13.52 K

Cinque Terre

0

ಸಂಬಂಧಿತ ಸುದ್ದಿ