ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ ರಸ್ತೆಯಲ್ಲಿ ಸೈಕಲ್ ಸವಾರ ಹಾಗೂ ನಾಯಿ ಮರಿಯೊಂದಿಗೆ ರಾಹುಲ್ ಗಾಂಧಿ ಆತ್ಮೀಯ ಕ್ಷಣ!

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಸ್ತೆಬದಿಯಲ್ಲಿ ಸರಳವಾಗಿ ಜನಸಾಮಾನ್ಯರೊಂದಿಗೆ ಬೆರೆಯುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯ ರಸ್ತೆಯೊಂದರಲ್ಲಿ ಸಾಗುತ್ತಿದ್ದ ವೇಳೆ, ಸೈಕಲ್ ಹ್ಯಾಂಡಲ್‌ಬಾರ್ ಮೇಲೆ ಮುದ್ದಾದ ಬಿಳಿ ಬಣ್ಣದ ನಾಯಿ ಮರಿಯನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದ ಸೈಕಲ್ ಸವಾರನನ್ನು ಕಂಡು ರಾಹುಲ್ ಗಾಂಧಿ ಅವರು ತಮ್ಮ ಕಾರು ನಿಲ್ಲಿಸಿ ಮಾತನಾಡಿಸಿದ್ದಾರೆ.

ರಾಹುಲ್ ಗಾಂಧಿ ಅವರು ಅತ್ಯಂತ ಪ್ರೀತಿಯಿಂದ ನಾಯಿ ಮರಿಯನ್ನು ಸವರಿ, "ಇದು ತುಂಬಾ ಮುದ್ದಾಗಿದೆ. ನಾಯಿಗೆ ಏನು ಆಹಾರ ನೀಡುತ್ತೀರಿ ಎಂದು ಸವಾರನಲ್ಲಿ ರಾಹುಲ್ ಕೇಳಿದಾಗ, "ಚಿಕನ್-ರೈಸ್ ಮತ್ತು ಹಾಲು ನೀಡುತ್ತೇನೆ" ಎಂದು ಆತ ಉತ್ತರಿಸಿದ್ದಾನೆ. ಈ ವೇಳೆ ಸೈಕಲ್ ಸವಾರನು ತಾನು ದೆಹಲಿಯ ತೀನ್ ಮೂರ್ತಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಹಳೆಯ ನೆನಪುಗಳನ್ನು ರಾಹುಲ್ ಗಾಂಧಿ ಅವರೊಂದಿಗೆ ಹಂಚಿಕೊಂಡಿದ್ದಾನೆ. ಸವಾರನ ಸರಳತೆಗೆ ಮೆಚ್ಚಿದ ರಾಹುಲ್ ಗಾಂಧಿ, "ಯಾವಾಗಲಾದರೂ ಮನೆಗೆ ಬನ್ನಿ" ಎಂದು ಆಹ್ವಾನ ನೀಡಿದ್ದಾರೆ.

ಪ್ರಿಯಾ ಪುರೋಹಿತ್ ಎಂಬುವವರು ಈ ವಿಡಿಯೋವನ್ನು ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, "ಟ್ರಸ್ಟ್ ಮಿ, ದಿಸ್ ಮ್ಯಾನ್ ಈಸ್ ಪ್ಯೂರ್ ಗೋಲ್ಡ್" ಎಂದು ಶೀರ್ಷಿಕೆ ನೀಡಿದ್ದಾರೆ. ಪ್ರಸ್ತುತ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ರಾಹುಲ್ ಗಾಂಧಿ ಅವರ ಸರಳತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Edited By : Nirmala Aralikatti
PublicNext

PublicNext

05/08/2026 02:15 pm

Cinque Terre

72.86 K

Cinque Terre

6

ಸಂಬಂಧಿತ ಸುದ್ದಿ