ಅಬ್ಬಬ್ಬಾ ಹೇಗೆ ಕಿತ್ತಾಡ್ತಾ ಇವೆ ನೋಡಿ ಬೆಕ್ಕು ಮತ್ತು ಪಾರಿವಾಳ! ಒಂದಕ್ಕೊಂದು ಸರಿಸಾಟಿಯಾಗಿ ನಿಂತು ಕಾಳಗ ಮಾಡ್ತಿರೋ ಈ ದೃಶ್ಯ ನೋಡಿ ನೀವು ನಕ್ಕು ನಕ್ಕು ಸುಸ್ತಾಗೋದಂತೂ ಖಂಡಿತ!
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ವಿಪಿನ್ ತಲ್ವಾರ್ ಎನ್ನುವವರು ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜನರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ಬೆಕ್ಕು ಮತ್ತು ಪಾರಿವಾಳದ ನಡುವೆ ನಡೆದ ಈ ರೋಚಕ ಹಾಗೂ ತಮಾಷೆಯ ಕಾದಾಟವೇ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಮುಖ್ಯ ಸಂಗತಿ. ಈ ಇಬ್ಬರು 'ಪುಟ್ಟ ಯೋಧರು' ಹೇಗೆ ಕಾದಾಟಕ್ಕಿಳಿದಿದ್ದಾರೆ ನೋಡಿ. ಬೆಕ್ಕು ತನ್ನ ಚಾಣಾಕ್ಷತನದಿಂದ ಪಾರಿವಾಳದ ಮೇಲೆ ಎರಗಲು ಪ್ಲಾನ್ ಮಾಡಿದ್ರೆ, ಈ ಕಡೆ ಪಾರಿವಾಳ ಮಾತ್ರ ಕಿಂಚಿತ್ತೂ ಹೆದರದೆ 'ನಾನೂ ಕಮ್ಮಿ ಇಲ್ಲ' ಅಂತ ಧೈರ್ಯವಾಗಿ ನಿಂತಿದೆ. ಬೆಕ್ಕಿನ ಪ್ರತಿಯೊಂದು ನಡೆಗೂ ಪಾರಿವಾಳ ನೀಡಿದ ದಿಟ್ಟ ಸವಾಲು ಕಂಡು, ಬೆಕ್ಕೇ ಶಾಕ್ ಆಗಿದೆ!
ಪಾರಿವಾಳದ ಈ ಕಠಿಣ ಪ್ರತಿರೋಧ ಕಂಡು ಗಾಬರಿಯಾದ ಬೆಕ್ಕು, ಕೊನೆಗೆ 'ಅಬ್ಬಾ... ಸಾಕಪ್ಪಾ ಸಾಕು, ಇದರ ಹತ್ತಿರ ಆಟ ನಡೆಯಲ್ಲ' ಅಂತ ಅಲ್ಲಿಂದ ಕಾಲ್ಕಿತ್ತು ಓಟ ಕಿತ್ತಿದೆ. ಈ ಇಬ್ಬರು ಪುಟ್ಟ ಯೋಧರ ಫನ್ನಿ 'ಮಹಾ ಯುದ್ಧ'ದ ದೃಶ್ಯಗಳು ಈಗ ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ.
PublicNext
05/08/2026 02:13 pm
LOADING...