ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾರ ನೆರವೂ ಸಿಗದೆ ತಾನೇ ಸ್ಕೂಟರ್ ಚಲಾಯಿಸಿ ಆಸ್ಪತ್ರೆಗೆ ಹೊರಟ ತುಂಬು ಗರ್ಭಿಣಿ : ಮಾರ್ಗಮಧ್ಯದಲ್ಲೇ ಹೆರಿಗೆ!

ವಿಯೆಟ್ನಾಂ: ತಾಯ್ತನ ಎಂಬುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಅತ್ಯಂತ ಪವಿತ್ರ ಹಾಗೂ ಮಹತ್ವದ ಕ್ಷಣ. ಆದರೆ, ಹೆರಿಗೆಯಂತಹ ಕಷ್ಟದ ಸಮಯದಲ್ಲಿ ಜೊತೆಗೆ ಯಾರೂ ಇಲ್ಲದೆ, ನೋವಿನ ನಡುವೆಯೂ ಮಹಿಳೆಯೊಬ್ಬಳು ಪಟ್ಟ ಯಾತನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ.

ಸಾಮಾಜಿಕ ಜಾಲತಾಣ 'X'ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಆಸ್ಪತ್ರೆಗೆ ಕರೆದೊಯ್ಯಲು ಯಾರೂ ಇಲ್ಲದಿದ್ದಾಗ ಸ್ವತಃ ತಾನೇ ಸ್ಕೂಟರ್ ಚಲಾಯಿಸಿಕೊಂಡು ಹೊರಟಿದ್ದಾಳೆ.

ತೀವ್ರ ನೋವಿನ ನಡುವೆಯೂ ಆಕೆ ಸ್ಕೂಟರ್ ಚಲಾಯಿಸುತ್ತಾ ಆಸ್ಪತ್ರೆ ತಲುಪಲು ಯತ್ನಿಸಿದ್ದಾಳೆ. ಆದರೆ, ದುರದೃಷ್ಟವಶಾತ್ ಆಸ್ಪತ್ರೆ ತಲುಪುವಷ್ಟರಲ್ಲಿ ನೋವು ತೀವ್ರಗೊಂಡು ಮಾರ್ಗಮಧ್ಯದಲ್ಲೇ ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅತ್ಯಂತ ತುರ್ತು ಮತ್ತು ಸೂಕ್ಷ್ಮ ಸಮಯದಲ್ಲಿ ಆಕೆಗೆ ನೆರವಾಗಲು ಕುಟುಂಬಸ್ಥರು ಅಥವಾ ಸ್ಥಳೀಯರು ಯಾರೂ ಇಲ್ಲದಿದ್ದುದಕ್ಕೆ ನೆಟ್ಟಿಗರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆಕೆಯ ಧೈರ್ಯವನ್ನು ಮೆಚ್ಚುವ ಜೊತೆಗೆ, "ಇಂತಹ ಪರಿಸ್ಥಿತಿ ಯಾವ ಮಹಿಳೆಗೂ ಬಾರದಿರಲಿ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Edited By :
PublicNext

PublicNext

04/08/2026 05:58 pm

Cinque Terre

27.86 K

Cinque Terre

1

ಸಂಬಂಧಿತ ಸುದ್ದಿ