ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿಯಲ್ಲಿ ಭಕ್ತಿಯಿಂದ ಜರುಗಿದ ಸಮುದ್ರ ಪೂಜೆ

ಗಂಗೊಳ್ಳಿ : ಈ ಸಾಲಿನಲ್ಲಿ ಮತ್ಸ್ಯಕ್ಷಾಮ ಬಾರದೆ, ಮೀನು ಸಮೃದ್ಧಿಯಾಗಿ ದೊರೆತು ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ-ಆತಂಕಗಳು ಎದುರಾಗದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸಮುದ್ರ ಪೂಜೆ ನೆರವೇರಿಸಿದರು.

ಗಂಗೊಳ್ಳಿಯ ಅರ್ಚಕ ವೇದಮೂರ್ತಿ ವಿಠಲ್‌ದಾಸ್ ಭಟ್ ಅವರ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ಪರ್ಸಿನ್ ಬೋಟ್, 370 ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಸಂಘದ ಸದಸ್ಯರು ಒಂದಾಗಿ ಸಮುದ್ರರಾಜನಿಗೆ ಹಾಲು, ಸೀಯಾಳ ಹಾಗೂ ಫಲಪುಷ್ಪಗಳನ್ನು ಅರ್ಪಿಸಿ ಪ್ರಾರ್ಥಿಸಿದರು.

ಪ್ರಸ್ತುತ ಕಡಲಿನಲ್ಲಿ ತೂಫಾನ್ (ಗಾಳಿಯೊತ್ತಡ) ಹೆಚ್ಚಾಗಿದೆ. ಹೀಗಾಗಿ ಎರಡು ತಿಂಗಳ ಮೀನುಗಾರಿಕಾ ನಿಷೇಧಾವಧಿ ಜುಲೈ 31ಕ್ಕೆ ಮುಕ್ತಾಯಗೊಂಡಿದ್ದರೂ ಸಹ ಕಡಲಿಗೆ ಇಳಿಯಲು ಸಾಧ್ಯವಾಗಿಲ್ಲ. ಪ್ರಸ್ತುತ ಗಂಗೊಳ್ಳಿಯ ದಡದಲ್ಲಿದ್ದ ಬೋಟ್‌ಗಳನ್ನು ನೀರಿಗೆ ಇಳಿಸುವ ಕಾರ್ಯ, ಬಲೆ ಹೆಣೆಯುವಿಕೆ, ಇತರೆ ಪರಿಕರಗಳನ್ನು ಒಟ್ಟುಗೂಡಿಸುವ ಹಾಗೂ ಬೋಟ್‌ಗಳಿಗೆ ಬಣ್ಣ ಬಳಿಯುವ ಕೆಲಸಗಳು ಭರದಿಂದ ಸಾಗಿವೆ. "ಗಂಗೊಳ್ಳಿಯಲ್ಲಿ ಆಗಸ್ಟ್ 16ರ ನಂತರ ಕಡಲಿಗೆ ಇಳಿಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ" ಎಂದು ಪರ್ಸಿನ್ ಬೋಟ್‌ಗಳ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ತಿಳಿಸಿದ್ದಾರೆ.

Edited By : Somashekar
PublicNext

PublicNext

05/08/2026 04:05 pm

Cinque Terre

6.86 K

Cinque Terre

0

ಸಂಬಂಧಿತ ಸುದ್ದಿ