ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗ ಅರಸರ ವೈಭವ ಕಣ್ತುಂಬಿಕೊಳ್ಳಲು ಸಚಿವ ರಾಮಲಿಂಗಾರೆಡ್ಡಿ ಮನವಿ

ಬೆಂಗಳೂರು: ತಾವು ಕಳೆದ 65 ವರ್ಷಗಳಿಂದ ತಪ್ಪದೇ ಲಾಲ್‌ಬಾಗ್ ಫ್ಲವರ್ ಶೋಗೆ ಬರುತ್ತಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಲಾಲ್ ಬಾಗ್ ಫ್ಲವರ್ ಶೋ ವೀಕ್ಷಿಸಿ ಮಾತನಾಡಿದ ಅವರು, ಪ್ರತಿಯೊಂದು ಬಾರಿಯೂ ಇಲ್ಲಿನ ಆಯೋಜಕರು ಅತ್ಯಂತ ಹೊಸತನದಿಂದ ಮತ್ತು ವಿಭಿನ್ನ ಶೈಲಿಯಲ್ಲಿ ಹೂವಿನ ಪ್ರದರ್ಶನವನ್ನು ವಿನ್ಯಾಸಗೊಳಿಸುವುದು. ವಿಶೇಷತೆಯಾಗಿದೆ

ಈ ಹಿಂದೆ ಜಗಜ್ಯೋತಿ ಬಸವಣ್ಣ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ನೆಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸೌರಭದ ಥೀಮ್‌ಗಳಲ್ಲಿ ಮೂಡಿಬಂದಿದ್ದ ಫ್ಲವರ್ ಶೋಗಳು ಜನಮನ ಗೆದ್ದಿದ್ದವು. ಆದರೆ, ಈ ಬಾರಿಯ ಫಲಪುಷ್ಪ ಪ್ರದರ್ಶನವು ಮತ್ತಷ್ಟು ವಿಶೇಷ ಹಾಗೂ ಕಣ್ಣಿಗೆ ಕಟ್ಟುವಂತಿದೆ. ಆ ಕಾಲದ ರಾಜರ ಕಾಲದ ಅದ್ಭುತ ದೇವಾಲಯಗಳ ಮಾದರಿಯನ್ನು ಅತ್ಯಂತ ಸುಂದರವಾಗಿ ಹೂವುಗಳಿಂದ ನಿರ್ಮಿಸಲಾಗಿದ್ದು, ಪೂರ್ವಜರು ಕಟ್ಟಿಸಿದ ಕಲಾತ್ಮಕ ದೇಗುಲಗಳ ವೈಭವವನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ವಮರುಸೃಷ್ಟಿಯಾಗಿರುವ ಈ ಐತಿಹಾಸಿಕ ಕಲೆ ಮತ್ತು ಗಂಗ ರಾಜವಂಶದ ಶ್ರೀಮಂತಿಕೆಯನ್ನು ಪ್ರತಿಯೊಬ್ಬರೂ ಭೇಟಿ ನೀಡಿ, ಕಣ್ತುಂಬಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Edited By : Somashekar
PublicNext

PublicNext

06/08/2026 11:15 pm

Cinque Terre

1.17 K

Cinque Terre

0