ಮಳೆಗಾಲದಲ್ಲಿ ಕೊಂಚ ನಿರ್ಲಕ್ಷ್ಯ ಹಾಗೂ ಅವಸರ ವಹಿಸಿದರೂ ಪ್ರಾಣಕ್ಕೆ ಕಂಟಕ ಎದುರಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿ ಘಟನೆಯೊಂದು ಸಂಭವಿಸಿದೆ. ರಭಸವಾಗಿ ಹರಿಯುತ್ತಿದ್ದ ನೀರಿನ ರಭಸವನ್ನು ಅಂದಾಜಿಸದೆ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರನೊಬ್ಬ, ತನ್ನ ಬೈಕ್ ಸಮೇತ ನೀರಿನ ಭೋರ್ಗರೆತಕ್ಕೆ ಕೊಚ್ಚಿಹೋಗಿದ್ದಾನೆ.
ತಲುಪಬೇಕಾದ ಗಮ್ಯಸ್ಥಾನಕ್ಕಿಂತ ನಿಮ್ಮ ಅಮೂಲ್ಯವಾದ ಜೀವವೇ ಮುಖ್ಯ. ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳು ಹಾಗೂ ಕಾಸ್‌ವೇಗಳ ಮೇಲೆ ನೀರು ಹರಿಯುವಾಗ ಎಷ್ಟೇ ತುರ್ತು ಕೆಲಸವಿದ್ದರೂ ಸಾಹಸಕ್ಕೆ ಕೈಹಾಕಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಮಳೆಗಾಲದಲ್ಲಿ ರಸ್ತೆ ಸಂಚಾರ: ನೆನಪಿರಲಿ ಈ ಮುಖ್ಯ ಸಂಗತಿಗಳು
ಸೇತುವೆ ಅಥವಾ ಕಾಲುವೆಗಳ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದರೆ, ನೀರಿನ ಆಳ ಮತ್ತು ರಭಸವನ್ನು ಅಂದಾಜಿಸುವುದು ಕಷ್ಟ. ಯಾವುದೇ ಕಾರಣಕ್ಕೂ ಇಂತಹ ಕಡೆಗಳಲ್ಲಿ ವಾಹನ ಚಲಾಯಿಸಬೇಡಿ.
ನೀರಿನ ಹರಿವಿನ ಒತ್ತಡಕ್ಕೆ ದ್ವಿಚಕ್ರ ವಾಹನಗಳು ಬೇಗನೆ ನಿಯಂತ್ರಣ ಕಳೆದುಕೊಂಡು ಜಾರಿ ಬೀಳುತ್ತವೆ.
ಕೊಂಚ ಸಮಯ ತಡವಾದರೂ ಪರವಾಗಿಲ್ಲ, ನೀರು ಇಳಿಯುವವರೆಗೆ ಸುರಕ್ಷಿತ ಸ್ಥಳದಲ್ಲಿ ಕಾಯುವುದು ಬುದ್ಧಿವಂತಿಕೆ.
"ನಿಮ್ಮ ಮನೆ ಮಂದಿ ನಿಮಗಾಗಿ ಕಾಯುತ್ತಿರುತ್ತಾರೆ. ಮಳೆಗಾಲದಲ್ಲಿ ಹರಿಯುವ ನೀರನ್ನು ದಾಟುವ ಸಾಹಸಕ್ಕೆ ಕೈಹಾಕಿ ಜೀವನದ ಜೊತೆ ಚೆಲ್ಲಾಟವಾಡಬೇಡಿ."
PublicNext
06/08/2026 03:31 pm
LOADING...