ಬಿಹಾರ: ಆಸ್ಪತ್ರೆಗೆ ಹೋದ್ರೆ ಜೀವ ಉಳಿಯುತ್ತೆ ಅನ್ನೋ ಭರವಸೆಯಂತೂ ಇರುತ್ತೆ. ಆದ್ರೆ ಬಿಹಾರದ ಈ ಆಸ್ಪತ್ರೆಗೆ ಹೋದ್ರೆ ಇರೋ ಜೀವಾನೂ ಹೋಗೋದು ಖಾತ್ರಿ! ಕಾಲು ಮುರಿದು ಆಸ್ಪತ್ರೆಗೆ ಬಂದ ಗಾಯಾಳುವಿಗೆ ವೈದ್ಯರು ಕೊಟ್ಟ ಚಿಕಿತ್ಸೆ ಏನು ಗೊತ್ತಾ? ಕಾಲಿಗೆ ಪ್ಲಾಸ್ಟರ್ ಹಾಕೋ ಬದಲಿಗೆ ರಟ್ಟಿನ ಬಾಕ್ಸ್ ಕಟ್ಟಿ ಕಳುಹಿಸಿದ್ದಾರೆ! ಹೌದು, ವೈದ್ಯಕೀಯ ಲೋಕವೇ ತಲೆತಗ್ಗಿಸೋ ಈ ಘೋರ ನಿರ್ಲಕ್ಷ್ಯದ ವರದಿ ಇಲ್ಲಿದೆ ನೋಡಿ.
ನೋಡ್ತಿದ್ದೀರಲ್ಲಾ ಈ ದೃಶ್ಯ... ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು ಬಂದ ಯುವಕನಿಗೆ ಇಲ್ಲಿ ಸಿಕ್ಕ ಚಿಕಿತ್ಸೆ ಪ್ಲಾಸ್ಟರ್ ಅಲ್ಲ! ಬದಲಿಗೆ ಕಾರ್ಗೊ ಬಾಕ್ಸ್‌ನ ರಟ್ಟು! ಇದು ಬಿಹಾರದ ಬೇಗಸರಾಯ್ ಜಿಲ್ಲೆಯ ಮಂಜೌಲ್ ಆಸ್ಪತ್ರೆಯಲ್ಲಿ ನಡೆದಿರೋ ಘಟನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ, ಕಾಲಿಗೆ ಬ್ಯಾಂಡೇಜ್ ಅಥವಾ ಪ್ಲಾಸ್ಟರ್ ಹಾಕಬೇಕಿತ್ತು. ಆದ್ರೆ ಆಸ್ಪತ್ರೆ ಸಿಬ್ಬಂದಿ ರಟ್ಟಿನ ತುಂಡನ್ನು ಕಾಲಿಗೆ ಕಟ್ಟಿ ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ.
ಮುಕೇಶ್ ಸಿಂಗ್ ಅನ್ನೋರು ಈ ದೃಶ್ಯವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಜಾಲತಾಣದಲ್ಲಿ ಆಕ್ರೋಶದ ಮಹಾಪೂರವೇ ಹರಿದುಬಂದಿದೆ! ದೇವರಂತಿರಬೇಕಾದ ವೈದ್ಯರು ಈ ರೀತಿ ಬೇಜವಾಬ್ದಾರಿಯಾಗಿ ನಡೆದುಕೊಂಡರೆ ಬಡ ರೋಗಿಗಳು ಎಲ್ಲಿಗೆ ಹೋಗಬೇಕು? ಸದ್ಯ ವೈರಲ್ ವೀಡಿಯೊ ಬೆನ್ನಲ್ಲೇ ಸಂಬಂಧಪಟ್ಟ ಅಧಿಕಾರಿಗಳು ಈ ವೈದ್ಯರ ವಿರುದ್ಧ ಕ್ರಮ ಕೈಗೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.
PublicNext
06/08/2026 03:58 pm