ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಬಂದು ಬೇಸರವಾಗಿದೆಯಾ? ಕೆಮಿಕಲ್ ಡೈ ಹಚ್ಚಿ ಹಚ್ಚಿ ಕೂದಲು ಇನ್ನಷ್ಟು ಹಾಳಾಗಿದೆಯಾ? ಹಾಗಿದ್ರೆ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸುವ, ನಮ್ಮ ಹಿತ್ತಲಲ್ಲೇ ಸಿಗೋ ಒಂದು ಅದ್ಭುತ ಮನೆಮದ್ದಿನ ಬಗ್ಗೆ ನಾವು ತಿಳಿಸಿಕೊಡ್ತೀವಿ.
ಹೌದು, ಮಾವಿನ ಹಣ್ಣಿನ ಋತುವಿನಲ್ಲಿ ನಾವು ಎಸೆದುಬಿಡುವ ಮಾವಿನ ಗೊರಟೆ ಕೂದಲಿನ ಆರೋಗ್ಯಕ್ಕೆ ಎಷ್ಟು ಉಪಯುಕ್ತ ಗೊತ್ತಾ? ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ಕೂದಲಿನ ಬುಡಕ್ಕೆ ಪೋಷಣೆ ನೀಡಿ, ನೈಸರ್ಗಿಕವಾಗಿ ಕಪ್ಪು ಬಣ್ಣವನ್ನು ಮರಳಿ ತರಲು ಸಹಾಯ ಮಾಡುತ್ತವೆ."
ಮೊದಲಿಗೆ, ಮಾವಿನ ಬೀಜವನ್ನು ಒಡೆದು ಒಳಗಿರುವ ಭಾಗವನ್ನು ಹೊರತೆಗೆದು ಚೆನ್ನಾಗಿ ಒಣಗಿಸಿ ಅಥವಾ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಸ್ವಲ್ಪ ಕರಿಬೇವು ಮತ್ತು ನೆಲ್ಲಿಕಾಯಿ ಪೌಡರ್ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆ ಸೇರಿಸಿ, ಸಣ್ಣ ಉರಿಯಲ್ಲಿ ಐದರಿಂದ ಹತ್ತು ನಿಮಿಷ ಬಿಸಿ ಮಾಡಿ ಕಪ್ಪಾಗುವವರೆಗೆ ಕಾಯಿಸಿ. ತಣ್ಣಗಾದ ನಂತರ, ಇದನ್ನು ಶೋಧಿಸಿ ಒಂದು ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಿ.
ಈ ಎಣ್ಣೆ ಅಥವಾ ಹೇರ್ ಮಾಸ್ಕ್ ಅನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ, ಎರಡರಿಂದ ಮೂರು ನಿಮಿಷ ಮಸಾಜ್ ಮಾಡಿ. ಕನಿಷ್ಠ ಒಂದರಿಂದ ಎರಡು ಗಂಟೆಗಳ ಕಾಲ ಹಾಗೆಯೇ ಬಿಟ್ಟು, ನಂತರ ಮೈಲ್ಡ್ ಶ್ಯಾಂಪೂ ಬಳಸಿ ತಲೆಸ್ನಾನ ಮಾಡಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುತ್ತಾ ಬಂದರೆ ಬಿಳಿ ಕೂದಲು ಕ್ರಮೇಣ ಕಪ್ಪಾಗಲು ಪ್ರಾರಂಭವಾಗುತ್ತದೆ.
ಯಾವುದೇ ಕೆಮಿಕಲ್ ಇಲ್ಲದೆ ನೈಸರ್ಗಿಕವಾಗಿ ನಿಮ್ಮ ಕೂದಲನ್ನು ಕಪ್ಪಾಗಿಸಿಕೊಳ್ಳಲು ಈ ಸರಳ ಮನೆಮದ್ದನ್ನು ಖಂಡಿತ ಪ್ರಯತ್ನಿಸಿ ನೋಡಿ. ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯಿಂದ ಇಂದಿನ ಯುವಜನತೆ ತೀವ್ರವಾಗಿ ಬಳಲುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕೃತಕ ಡೈಗಳು ಕೂದಲಿಗೆ ಹಾನಿ ಮಾಡುತ್ತವೆ. ಆದರೆ, ಮನೆಯಲ್ಲೇ ಸಿಗುವ ಮಾವಿನ ಗೊರಟೆ ಬಳಸಿ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸಬಹುದು.
PublicNext
06/08/2026 08:51 pm