ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳ ಸುತ್ತ 50 ಮೀ. ಜಂಕ್ ಫುಡ್ ಬ್ಯಾನ್

ಬೆಂಗಳೂರು : ಮಕ್ಕಳ ಆರೋಗ್ಯಕ್ಕೆ ಕಂಟಕವಾಗುತ್ತಿರುವ ಜಂಕ್ ಫುಡ್‌ಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಬಿಗ್ ಪ್ಲಾನ್ ಮಾಡಿದೆ. ಇಂದು ಆರೋಗ್ಯ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಹಾರ ಸಚಿವ ಯು.ಟಿ. ಖಾದರ್, ಶಾಲಾ-ಕಾಲೇಜುಗಳ ಕ್ಯಾಂಪಸ್ ಹಾಗೂ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಈ ನಿಯಮದಂತೆ, ಶಾಲೆಯ ಸುತ್ತಮುತ್ತ HFSS ಅಂದರೆ ಅಧಿಕ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಂಶವಿರುವ ಆಹಾರಗಳ ಮಾರಾಟ, ಉಚಿತ ವಿತರಣೆ ಹಾಗೂ ಜಾಹೀರಾತುಗಳನ್ನು ಕಟ್ಟುನಿಟ್ಟಾಗಿ ತಡೆಯಲಾಗುತ್ತಿದ್ದು, ಶಾಲೆಗಳಲ್ಲಿ ಎಚ್ಚರಿಕೆ ಫಲಕ ಹಾಕುವುದು ಕಡ್ಡಾಯವಾಗಿದೆ. ಶಾಲೆಗಳ ಬಳಿ ಇರುವ ಹೋಟೆಲ್, ಬೇಕರಿ, ಕ್ಯಾಂಟೀನ್ ಹಾಗೂ ಟೀ ಸ್ಟಾಲ್‌ಗಳು FSSAI ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಹಾರ ಸುರಕ್ಷತಾ ಪರವಾನಗಿ ಹೊಂದಿರಲೇಬೇಕು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಆಹಾರ ಸುರಕ್ಷತಾ ಅಧಿಕಾರಿಗಳು ಶಾಲೆಗಳ ಸುತ್ತಮುತ್ತ ನಿಯಮಿತವಾಗಿ ಪರಿಶೀಲನೆ ನಡೆಸಲಿದ್ದು, ನಿಯಮ ಉಲ್ಲಂಘಿಸಿದರೆ ಸುಧಾರಣಾ ನೋಟಿಸ್, ಆಹಾರ ವಶಪಡಿಸಿಕೊಳ್ಳುವುದು, ಪರವಾನಗಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Edited By :
PublicNext

PublicNext

31/07/2026 07:45 pm

Cinque Terre

91.39 K

Cinque Terre

7

ಸಂಬಂಧಿತ ಸುದ್ದಿ