ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯರ ಆರೋಗ್ಯಕ್ಕೆ 'ಋತುತಾರೆ' ಆಸರೆ:ಬ್ರ್ಯಾಂಡ್ ಅಂಬಾಸಿಡರ್ ಆಗಿ ನಟಿ ರಮ್ಯ ಆಯ್ಕೆ!

ಬೆಂಗಳೂರು : ಕರ್ನಾಟಕ ಸರ್ಕಾರವು ಮಹಿಳೆಯರ ಆರೋಗ್ಯಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ 'ವುಮೆನ್ ಹೆಲ್ತ್ ಪಾಲಿಸಿ' ಜಾರಿಗೆ ತರಲು ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಪ್ರಸ್ತುತ ಇರುವ ಸಾಮಾನ್ಯ ಹೆಲ್ತ್ ಪಾಲಿಸಿಗಳ ಜೊತೆಗೆ ಮಹಿಳೆಯರಿಗಾಗಿಯೇ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದ್ದು, ಮಹಿಳೆಯರಲ್ಲಿ ಋತುಚಕ್ರ ಹಾಗೂ ಋತುಬಂಧ (ಮೆನೋಪಾಸ್) ಕುರಿತು ಜಾಗೃತಿ ಮೂಡಿಸಲು 'ಋತುತಾರೆ' ಎಂಬ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ. ಈ ಯೋಜನೆಯಡಿ ಸೂಕ್ತ ಪೌಷ್ಟಿಕ ಆಹಾರ, ನಿದ್ರೆ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ.

ಈ ನೂತನ ನೀತಿ ರೂಪಿಸಲು ಡಾ. ಜ್ಯೋತ್ಸ್ನಾ ಅವರ ಅಧ್ಯಕ್ಷತೆಯಲ್ಲಿ ಪಾಲಿಸಿ ಕಮಿಟಿ ರಚಿಸಲಾಗಿದೆ. ಅಷ್ಟೇ ಅಲ್ಲದೆ, ಈ ಚೈಲ್ಡ್ ಅಂಡ್ ವುಮೆನ್ ಹೆಲ್ತ್ ಯೋಜನೆಗೆ ಸಂಬಂಧಿಸಿದಂತೆ ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಲು ನಟಿ ರಮ್ಯ ಅವರನ್ನು ಅಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

Edited By :
PublicNext

PublicNext

05/08/2026 07:57 am

Cinque Terre

15.74 K

Cinque Terre

2

ಸಂಬಂಧಿತ ಸುದ್ದಿ