ಬೆಂಗಳೂರು: ಗೌರಿಗಣೇಶ ಹಬ್ಬದ ಹಿನ್ನೆಲೆ ಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟೂರು ಕನಕಪುರದ ದೊಡ್ಡಾಲಹಳ್ಳಿ ಗ್ರಾಮದಲ್ಲಿರುವ ತಮ್ಮ ಅಜ್ಜಿ, ತಂದೆ ಸಮಾಧಿಗೆ ನಾಳೆ ಪೂಜೆ ಸಲ್ಲಿಸಲಿದ್ದಾರೆ.
ತಮ್ಮ ಕುಟುಂಬದ ಸಂಪ್ರದಾಯದಂತೆ ಪ್ರತಿವರ್ಷವೂ ಸಹ ಈ ಕಾರ್ಯಕ್ರಮ ನಡೆಯಲಿದೆ. ಡಿಕೆಶಿ ಜೊತೆಗೆ ಸಹೋದರ ಡಿ.ಕೆ.ಸುರೇಶ್ ಸೇರಿ ಪತ್ನಿ ಮಕ್ಕಳು ಭಾಗಿಯಾಗಲಿದ್ದಾರೆ. ಬೆಳಗ್ಗೆ 11 ಕ್ಕೆ ಪೂಜೆ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. ಜೊತೆಗೆ ಇಡೀ ದಿನ ಕನಕಪುರದಲ್ಲಿಯೇ ಕಾಲಕಳೆಯಲಿದ್ದಾರೆ. ಪೂಜಾ ವೇಳೆ ಸ್ಥಳದಲ್ಲಿ ಊಟದ ವ್ಯವಸ್ಥೆಯೂ ಇರಲಿದೆ ಎನ್ನಲಾಗಿದೆ.
Kshetra Samachara
13/09/2026 10:57 pm
LOADING...