ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂಬೈ: ದುವಾಗೆ ಸಿಕ್ಕಳು ಪುಟ್ಟ ತಂಗಿ; ಮತ್ತೊಂದು ಹೆಣ್ಣು ಮಗುವಿನ ಪೋಷಕರಾದ ದೀಪಿಕಾ-ರಣವೀರ್.!

ಮುಂಬೈ: ಬಾಲಿವುಡ್‌ನ ಜನಪ್ರಿಯ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಕುಟುಂಬದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದಂಪತಿ ಎರಡನೇ ಮಗುವನ್ನು ಸ್ವಾಗತಿಸಿದ್ದು, ಮತ್ತೊಂದು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಹೆಣ್ಣು ಮಗುವಿನ ಆಗಮನವಾಗಿರುವ ಸಂತಸದ ಸುದ್ದಿಯನ್ನು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ದಂಪತಿ ಜಂಟಿಯಾಗಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ನವಜಾತ ಮಗುವಿನ ಪುಟ್ಟ ಪಾದದ ಗುರುತು ಕಾಣಿಸಿಕೊಂಡಿದ್ದು, “Welcome Baby Girl! 19|9|2026. Dua, Deepika & Ranveer” ಎಂದು ಬರೆಯಲಾಗಿದೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈಗಾಗಲೇ ಒಂದು ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ ದಂಪತಿಗೆ ಮೊದಲ ಮಗಳು ದುವಾ ಜನಿಸಿದ್ದರು. ಇದೀಗ ಎರಡನೇ ಮಗುವಾಗಿ ಮತ್ತೊಂದು ಹೆಣ್ಣು ಮಗು ಮನೆಗೆ ಆಗಮಿಸಿದ್ದು, ದುವಾ ಅಕ್ಕನಾಗಿದ್ದಾಳೆ.

ಎರಡನೇ ಮಗುವಿನ ಆಗಮನದ ಸುದ್ದಿಯನ್ನು ದಂಪತಿ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ದೀಪಿಕಾ ಮತ್ತು ರಣವೀರ್ ದಂಪತಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

Edited By :
PublicNext

PublicNext

19/09/2026 10:58 pm

Cinque Terre

20.67 K

Cinque Terre

0

ಸಂಬಂಧಿತ ಸುದ್ದಿ