ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನಕಪುರ: ಮುಗಿಯದ ನೈಸ್ ರೋಡ್ ಟೋಲ್ ವಿವಾದ!

ನಕಪುರ: ಟೋಲ್ ಪಾವತಿ ವಿಚಾರವಾಗಿ ಬೈಕ್ ಸವಾರರು ಮತ್ತು ಸಿಬ್ಬಂದಿ ನಡುವೆ ಗಲಾಟೆ ನೈಸ್ ರೋಡ್‌ನಲ್ಲಿ ಮತ್ತೆ ಮುಂದುವರಿದಿದೆ. ಟೋಲ್ ಪಾವತಿಗೆ ಬೈಕ್ ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಟೋಲ್ ಪಾವತಿ ಮಾಡದೆ ಬೈಕ್‌ಗಳನ್ನು ಬಿಡಲು ಸಿಬ್ಬಂದಿ ನಿರಾಕರಿಸಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು, ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ನಿತ್ಯವೂ ಟೋಲ್ ಸಿಬ್ಬಂದಿ ಮತ್ತು ಸವಾರರ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇತ್ತ ಸವಾರರ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಸಿಬ್ಬಂದಿ ಹೈರಾಣಾಗಿದ್ದಾರೆ. ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Edited By :
PublicNext

PublicNext

14/09/2026 11:06 am

Cinque Terre

7.37 K

Cinque Terre

0