ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಯಾದಗಿರಿ ರೈಲು ನಿಲ್ದಾಣಕ್ಕೆ ಹೈಟೆಕ್ ಟಚ್; ಇಂಟರ್‌ಸಿಟಿ ರೈಲು ಮರುಪ್ರಾರಂಭಕ್ಕೆ ಆಗ್ರಹ

ಯಾದಗಿರಿ: ಯಾದಗಿರಿ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಬೇಕು, ಜಿಲ್ಲೆಯ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಕಲ್ಪಿಸಬೇಕು ಹಾಗೂ ಕೊರೊನಾ ಸಂದರ್ಭದಲ್ಲಿ ಸ್ಥಗಿತಗೊಂಡಿರುವ ಇಂಟರ್‌ಸಿಟಿ ರೈಲನ್ನು ಮರುಪ್ರಾರಂಭಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ್ ಬೇಡಿಕೆ ಇಟ್ಟಿದ್ದಾರೆ. ಸಿಕಂದರಾಬಾದ್ ವಿಭಾಗೀಯ ರೈಲ್ವೆ ಅಧಿಕಾರಿ ಆರ್. ಗೋಪಾಲ್ ಕೃಷ್ಣನ್ ಅವರಿಗೆ ಮನವಿ ಸಲ್ಲಿಸಲಾಗಿದೆ.

ಯಾದಗಿರಿ ನಿಲ್ದಾಣದಲ್ಲಿ ಎಸಿ ವಿಶ್ರಾಂತಿ ಕೊಠಡಿ, ಲಿಫ್ಟ್, ಪ್ಲಾಟ್‌ಫಾರಂ ಮೇಲ್ಛಾವಣಿ, ಆಸನ ಹಾಗೂ ವಯೋವೃದ್ಧರಿಗೆ ವಿದ್ಯುತ್ ಚಾಲಿತ ವಾಹನ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು. ಜಿಲ್ಲೆಯಿಂದ ಉದ್ಯೋಗಕ್ಕಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಹೆಚ್ಚುವರಿ ಜನರಲ್ ಬೋಗಿ ಅಳವಡಿಸಬೇಕು ಎಂದರು. ಇದೇ ವೇಳೆ ಠಾಣಗುಂದಿ ರೈಲು ನಿಲ್ದಾಣದ ಬಳಿ ಬಹುದಿನಗಳ ಬೇಡಿಕೆಯಾದ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಿಸಿ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Edited By :
PublicNext

PublicNext

14/09/2026 02:15 pm

Cinque Terre

6.72 K

Cinque Terre

0