ಹಾಸನ : ಸಂಘದ ಅಭಿವೃದ್ಧಿಯಲ್ಲಿ ಒಕ್ಕೂಟದ ಪದಾಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬ ಪದಾಧಿಕಾರಿಯೂ ಸಂಘದ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಿ, ಸಂಘದ ನಿಯಮ-ವಿಧಾನಗಳನ್ನು ತಪ್ಪದೇ ಪಾಲಿಸಬೇಕು ಎಂದು ಆಲೂರು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಆಶಾ ಹೇಳಿದರು.
ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಆಲೂರು ಯೋಜನಾ ಕಚೇರಿ ವ್ಯಾಪ್ತಿಯ ಪಾಳ್ಯ, ಕಾಮತಿಕೂಡಿಗೆ ಹಾಗೂ ಕಂದಲಿ ವಲಯಗಳ ಆಲೂರು, ಬಿಕ್ಕೋಡು, ಭರತವಳ್ಳಿ ಮತ್ತು ಬೈರಾಪುರ ಕಾರ್ಯಕ್ಷೇತ್ರಗಳ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಶಾ, ಸಂಘದ ಸಭೆಗಳಲ್ಲಿ ಸಂಘದ ಆಗುಹೋಗುಗಳ ಕುರಿತು ಚರ್ಚಿಸುವುದರಿಂದ ಪದಾಧಿಕಾರಿಗಳಿಗೆ ಸಂಘದ ಹಣಕಾಸು ಮತ್ತು ವ್ಯವಹಾರಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ದೊರೆಯುತ್ತದೆ. ಇದರಿಂದ ಸಂಘವನ್ನು ಉತ್ತಮವಾಗಿ ಮುನ್ನಡೆಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಮೈಸೂರು ಪ್ರಾದೇಶಿಕ ಕಚೇರಿಯ SHG ಸೇವಾ ವಿಭಾಗದ ಯೋಜನಾಧಿಕಾರಿ ಪ್ರಸಾದ್, ಕ್ಷೇತ್ರ ಯೋಜನಾಧಿಕಾರಿ ರತ್ನಾಕರ ಕೊಠಾರಿ, ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಶಿವಕುಮಾರ್, ಜಿಲ್ಲಾ ವಿಚಕ್ಷಣಾಧಿಕಾರಿ ಅರುಣ್, ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
15/09/2026 11:45 am
LOADING...