ನಿನ್ನೆ ಸಂಜೆ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿ ಮಾಡಿದೆ. ನೆಲಮಂಗಲ ಭಾಗದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಯ ನೀರು ಮನೆಗೆ ನುಗ್ಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಜೆ ಸುರಿದ ಮಳೆಯಿಂದಾಗಿ ನೆಲಮಂಗಲ ಭಾಗದ ಬಾಗಲಗುಂಟೆ ವ್ಯಾಪ್ತಿಯ ಸುತ್ತಮುತ್ತ ಅವಾಂತರವಾಗಿದೆ. ರಾಜಕಾಲುವೆ ಕಾಮಗಾರಿ ಹಿನ್ನೆಲೆ ಸಂಜೆ ಮನೆಗಳಿಗೆ ಕೊಳಚೆ ನೀರು ನುಗ್ಗಿತ್ತು.
ಅಂದಾನಪ್ಪ ಲೇಔಟ್, ಭೈರವೇಶ್ವರ ನಗರದ 12 ಮನೆಗಳಿಗೆ ಮಳೆ ನೀರು ನುಗ್ಗಿದ ಮಾಹಿತಿ ಇದೆ. ಮನೆಯ ಸೆಲ್ಲಾರ್ ಒಳಗೆ ನೀರು ತುಂಬಿ ಐದಾರು ಬೈಕ್‌ಗಳು ಮುಳುಗಡೆಯಾಗಿವೆ. ಸ್ಥಳಕ್ಕೆ ಬಾರದ ಜಿಬಿಎ ಅಧಿಕಾರಿಗಳ ವಿರುದ್ಧ ನಿವಾಸಿಗಳ ಆಕ್ರೋಶ ವ್ಯಕ್ತವಾಗಿದೆ. ರಾತ್ರಿ ಎಂಟು ಗಂಟೆ ವೇಳೆಯಲ್ಲಿ ನಡೆದಿರೋ ಘಟನೆ ಎನ್ನುವ ಮಾಹಿತಿ ಇದೆ.
Kshetra Samachara
16/09/2026 09:22 am
LOADING...