ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಟ್ ಅಂಡ್ ರನ್ ಗೆ ದಂಪತಿ ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಸೇತುವೆ ಮೇಲೆ ಘಟನೆ ನಡೆದಿದೆ. ದರ್ಶನ್ (25) ಹಾಗೂ ಉಷಾರಾಣಿ (21) ಮೃತ ದಂಪತಿಯಾಗಿದ್ದಾರೆ.
ಶಿರಾ ತಾಲೂಕಿನ ಹುಣಿಸೇಕಟ್ಟೆಯಿಂದ ದಂಪತಿ ಬೈಕ್ ನಲ್ಲಿ ಬೆಂಗಳೂರಿನ ಮಾರ್ಗದತ್ತ ತೆರಳುತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದು ಗಾಯಾಳು ಉಷಾರಾಣಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
PublicNext
16/09/2026 03:48 pm
LOADING...