ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಜಪಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಯುವಜನತೆಗೆ ಸುವರ್ಣಾವಕಾಶ: ವರ್ಲ್ಡ್ ಸ್ಕಿಲ್ ಸ್ಪರ್ಧೆಯ ನೋಂದಣಿ ಅವಧಿ ವಿಸ್ತರಣೆ!

ಚಿಕ್ಕಮಗಳೂರು : ವಿಶ್ವದ ಅತಿ ದೊಡ್ಡ ಕೌಶಲ್ಯ ಹಬ್ಬವಾದ ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ವರ್ಲ್ಡ್ ಸ್ಕಿಲ್’ ಸ್ಪರ್ಧೆಯ ನೋಂದಣಿ ದಿನಾಂಕವನ್ನು ಸೆಪ್ಟೆಂಬರ್ 22ರವರೆಗೆ ವಿಸ್ತರಿಸಲಾಗಿದೆ. ಜಪಾನ್‌ನ ಐಚಿ ನಗರದಲ್ಲಿ ನಡೆಯಲಿರುವ ‘ವರ್ಲ್ಡ್ ಸ್ಕಿಲ್ಸ್ 2028’ ಜಾಗತಿಕ ಸ್ಪರ್ಧೆಯ ಹಿನ್ನೆಲೆಯಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ರಾಜ್ಯ ಕೌಶಲ್ಯ ಒಲಿಂಪಿಕ್ಸ್ ಆಯೋಜಿಸುತ್ತಿದೆ.

16ರಿಂದ 25 ವರ್ಷ ವಯೋಮಿತಿಯ, 63 ವೃತ್ತಿಪರ ಕೌಶಲ್ಯಗಳಲ್ಲಿ ನೈಪುಣ್ಯ ಹೊಂದಿರುವ ಯುವಕ-ಯುವತಿಯರು ಇದರಲ್ಲಿ ಉಚಿತವಾಗಿ ಭಾಗವಹಿಸಬಹುದು. ಉತ್ತಮ ಪ್ರದರ್ಶನ ನೀಡುವ ಅಭ್ಯರ್ಥಿಗಳಿಗೆ ನಗದು ಬಹುಮಾನ ಹಾಗೂ ಉನ್ನತ ಮಟ್ಟದ ಉಚಿತ ತರಬೇತಿ ಲಭಿಸಲಿದ್ದು, ರಾಜ್ಯಮಟ್ಟದ ವಿಜೇತರು ‘ಟೀಮ್ ಇಂಡಿಯಾ’ವನ್ನು ಪ್ರತಿನಿಧಿಸುವ ಅವಕಾಶ ಪಡೆಯಲಿದ್ದಾರೆ.

ಅರ್ಹ ವಿದ್ಯಾರ್ಥಿಗಳು Skill India Digital ವೆಬ್‌ಸೈಟ್‌ಗೆ ಭೇಟಿ ನೀಡಿ, ‘indiaskills2026’ ಲಿಂಕ್ ಮೂಲಕ ಮೊಬೈಲ್ ಸಂಖ್ಯೆ, ಇ-ಕೆವೈಸಿ ಹಾಗೂ ಅಗತ್ಯ ವಿವರಗಳನ್ನು ಭರ್ತಿ ಮಾಡಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ +91 9606492216 ಅನ್ನು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಸಂಪರ್ಕಿಸಬಹುದೆಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

17/09/2026 06:38 pm

Cinque Terre

740

Cinque Terre

0