ಕಲಬುರಗಿ : ಮಳೆ ಇಲ್ಲದೆ ಜನರಿಗೆ ಕುಡಿಯಲು ನೀರು ಇಲ್ಲದ ಸ್ಥಿತಿಯಲ್ಲಿರುವ ನಡುವೆಯೇ ಭೀಮಾನದಿಯಲ್ಲಿ ನಿಗೂಢವಾಗಿ ಸಾವಿರಾರು ಮೀನುಗಳು ಸಾವನ್ನಪ್ಪಿ ತೇಲಿದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಇಟಗಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಲುಷಿತ ನೀರಿನ ಹಿನ್ನೆಲೆಯಲ್ಲಿ ಮೀನುಗಳು ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಏಕಾಏಕಿ ನದಿಯೊಳಗೆ ಸಾವಿರಾರು ಮೀನುಗಳು ಸಾವನ್ನಪ್ಪಿ ನದಿ ದಡದಲ್ಲಿ ತೇಲಿವೆ. ನದಿಯೊಳಗೆ ಮೀನುಗಳು ಸಾವನ್ನಪ್ಪಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ವ್ಯಕ್ತವಾಗಿದೆ. ಈ ನೀರು ಮುಂದೆ ಸಾಗಿ ಕಲಬುರಗಿ ನಗರಕ್ಕೆ ಕುಡಿಯಲು ಸರಬರಾಜಾಗುತ್ತದೆ. ಆದ್ದರಿಂದ ನೀರು ಕುಡಿಯುವ ಕಲಬುರಗಿ ನಗರದ ಜನರಲ್ಲಿಯೂ ಆತಂಕ ಮನೆಮಾಡಿದೆ.
Kshetra Samachara
18/09/2026 04:30 pm
LOADING...