ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಇನ್ಸ್‌ಪೆಕ್ಟರ್ ಎಚ್ಚರಿಕೆ ನಡುವೆಯೂ ಲಿಂಕ್ ರಸ್ತೆಗೆ ಎಂಟ್ರಿ ಕೊಟ್ಟ ಗಣೇಶೋತ್ಸವ ಮೆರವಣಿಗೆ

ಟಿ. ನರಸೀಪುರದಲ್ಲಿ ಗಣೇಶೋತ್ಸವ ವಿವಾದ | ಮಸೀದಿ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್

ಮೈಸೂರು: ಗಣೇಶೋತ್ಸವದ ಅಂಗವಾಗಿ ಟಿ. ನರಸೀಪುರ ಪಟ್ಟಣದಲ್ಲಿ ನಡೆಯುತ್ತಿರುವ ಶೋಭಾಯಾತ್ರೆ ಲಿಂಕ್ ರಸ್ತೆಗೆ ಪ್ರವೇಶಿಸಿದ್ದು, ಮಸ್ಜಿದ್-ಇ-ನೂರ್ ಮಸೀದಿ ಇರುವ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಮೆರವಣಿಗೆ ಲಿಂಕ್ ರಸ್ತೆಯತ್ತ ತೆರಳದಂತೆ ಯುವಕರಿಗೆ ಟಿ. ನರಸೀಪುರ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ್ ಅವರು ಮುನ್ನೆಚ್ಚರಿಕೆ ನೀಡಿದ್ದರು ಎನ್ನಲಾಗಿದ್ದು, ಇದೀಗ ಅವರ ಎಚ್ಚರಿಕೆಯ ನಡುವೆಯೂ ಹಿಂದೂ ಜಾಗರಣ ವೇದಿಕೆ (ಹಿಂಜಾವೇ) ಕಾರ್ಯಕರ್ತರು ಮೆರವಣಿಗೆಯನ್ನು ಲಿಂಕ್ ರಸ್ತೆಯ ಮೂಲಕ ಕೊಂಡೊಯ್ದಿದ್ದಾರೆ.

ಮೆರವಣಿಗೆ ಮಸೀದಿ ಸಮೀಪ ಸಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಸೀದಿ ಮುಂಭಾಗದಲ್ಲಿ ನೂರಕ್ಕೂ ಹೆಚ್ಚು ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.

ಮೆರವಣಿಗೆ ಸಾಗುವ ಸಂದರ್ಭದಲ್ಲಿ ಮಸೀದಿ ನೇರವಾಗಿ ಗೋಚರಿಸದಂತೆ ಪೊಲೀಸ್ ವ್ಯಾನ್ ಹಾಗೂ ಬಸ್‌ಗಳನ್ನು ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಲಾಗಿದ್ದು, ಕೆಎಸ್‌ಆರ್‌ಪಿ ಸಿಬ್ಬಂದಿ ಭದ್ರತೆಯಲ್ಲಿ ನಿಯೋಜಿತರಾಗಿದ್ದಾರೆ.

ಪ್ರದೇಶದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

Edited By :
PublicNext

PublicNext

19/09/2026 12:01 pm

Cinque Terre

8.34 K

Cinque Terre

0

ಸಂಬಂಧಿತ ಸುದ್ದಿ