ರಾಯಚೂರು : ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕಾದ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ರಾತ್ರಿ ಬಂದ್ ಆಗಿದ್ದರಿಂದ ಚಿಕಿತ್ಸೆ ಪಡೆಯಲು ಬಂದವರು ಪರದಾಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕಲ್ಲೂರು PHC ಸೆಂಟರ್ ವಿರುದ್ಧ ಇಂತಹ ಗಂಭೀರ ಆರೋಪ ಕೇಳಿಬಂದಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಪಕ್ಕದ ಕಾರಲಕುಂಟಿ ಗ್ರಾಮದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ಬಂದಾಗ ರಾತ್ರಿ ಆಸ್ಪತ್ರೆಯ ಬಾಗಿಲು ಬಂದ್ ಆಗಿತ್ತು ಎನ್ನಲಾಗಿದೆ. ಇದರಿಂದ ಗರ್ಭಿಣಿ ಮಹಿಳೆ ಹಾಗೂ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ. ಸಹಾಯಕ್ಕಾಗಿ ಇಡೀ ರಾತ್ರಿ ಆಸ್ಪತ್ರೆಯ ಬಾಗಿಲು ಬಡಿದು ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೂ ಯಾವುದೇ ಉತ್ತರ ಸಿಗಲಿಲ್ಲ ಎಂದು ಆರೋಪಿಸಲಾಗಿದೆ.
PublicNext
20/10/2026 08:04 am
LOADING...